ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಜಲ ಸಂರಕ್ಷಣೆ ಕಾರ್ಯಗತವಾಗಲಿ'

Last Updated 7 ಅಕ್ಟೋಬರ್ 2017, 5:02 IST
ಅಕ್ಷರ ಗಾತ್ರ

ಕೆರೂರ: ಪರಿಸರದ ಉಳಿವಿಗೆ ಪ್ರತಿಯೊಬ್ಬರಲ್ಲಿ ಜಲ ಸಾಕ್ಷರತೆ, ಸಂರಕ್ಷಣೆ ಅತ್ಯವಶ್ಯವಾಗಿದೆ ಎಂದು ದೇವಾಂಗಮಠದ ರುದ್ರಮುನಿ ಸ್ವಾಮೀಜಿ ಹೇಳಿದರು. ಪಟ್ಟಣದ ದೇವಾಂಗ ಸಮಾಜ, ದೇವಾಂಗ ಯುವಸೇನೆ ಹಾಗೂ ನಾಗರಿಕರ ವತಿಯಿಂದ ಕೆರೂರ ಕೆರೆಗೆ ಬಾಗೀನ ಅರ್ಪಿಸಿ ಮಾತನಾಡಿದರು.

’ನೀರಿನ ಮಿತ ಬಳಕೆಗೆ ಆದ್ಯತೆ ನೀಡಬೇಕು. ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಜಾಗೃತಿ ಅಂದೋಲನ ರೂಪಿಸಬೇಕು’ ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಹೊಸಪೇಟೆಯ ಬನಶಂಕರಿ ದೇಗುಲದಿಂದ ವಿವಿಧ ವಾದ್ಯಮೇಳಗಳ ಮೆರವಣಿಗೆಯು ಕಿಲ್ಲಾಪೇಟೆ ಬಳಿಯ ಕೆರೆಯ ಅಂಗಳದವರೆಗೂ ನಡೆಯಿತು.

ಪ್ರಮುಖರಾದ ಸಂಕಣ್ಣ ಹೊಸಮನಿ, ವಿಠ್ಠಲಗೌಡ ಗೌಡರ, ಪ್ರಮುಖ ಸಿದ್ಧನಗೌಡ್ರ ಪಾಟೀಲ, ಅಶೋಕ ಜಿಗಳೂರ, ತಿಪ್ಪಣ್ಣ ಹೆಬ್ಬಳ್ಳಿ, ವಿಠ್ಠಲ ಸಣ್ಣಕ್ಕಿ, ಗುಂಡಣ್ಣ ಬೋರಣ್ಣವರ, ಶಂಕ್ರಪ್ಪ ಗದಗಿನ, ಶೇಖರ ಧುತ್ತರಗಿ, ರಾಘು ರಾಮದುರ್ಗ, ಅರ್ಜುನ ಹರದೊಳ್ಳಿ, ಬಸು ಲ್ಯಾವಿ, ವೀರಭದ್ರ ಮಾನ್ವಿ, ಗೋಪಾಲ ಕರಿಮರಿ, ಈಶ್ವರ ಕಡಿವಾಲದ, ಪುಂಡಲೀಕ ಕ್ವಾಣ್ಣೂರ, ವಿಜು ಬೋರಣ್ಣವರ ಹೊಸಪೇಟೆ, ಬಸರಿಗಿಡಪೇಟೆ, ನೆಹರುನಗರದ ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT