ತೆರದಾಳದಿಂದ ಸ್ಪರ್ಧಿಸುವುದಿಲ್ಲ: ಬಿಎಸ್‌ವೈ

ಗುರುವಾರ , ಜೂನ್ 20, 2019
26 °C

ತೆರದಾಳದಿಂದ ಸ್ಪರ್ಧಿಸುವುದಿಲ್ಲ: ಬಿಎಸ್‌ವೈ

Published:
Updated:
ತೆರದಾಳದಿಂದ ಸ್ಪರ್ಧಿಸುವುದಿಲ್ಲ: ಬಿಎಸ್‌ವೈ

ಲೋಕಾಪುರ: ‘ಮತದಾರರ, ಕಾರ್ಯಕರ್ತರ ಬಯಕೆಯಂತೆ ಶಿಕಾರಿಪುರದಿಂದಲೇ ಸ್ಪರ್ಧಿಸುತ್ತೇನೆ ಹೊರತು ತೇರದಾಳ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತೇರದಾಳದಲ್ಲಿ ನೇಕರಾರ ಸಮೇವೇಶಕ್ಕೆ ತೆರಳುವ ವೇಳೆ ಲೋಕಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕಾರಿಪುರ ಜನರು ಕ್ಷೇತ್ರ ಬಿಟ್ಟುಹೋಗದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಮೊದಲು ಒಪ್ಪಿಕೊಂಡಿದ್ದೇ ಆದರೆ ರಾಜಕೀಯ ಜನ್ಮ ಕೊಟ್ಟಿರುವ ಶಿಕಾರಿಪುರ ಕ್ಷೇತ್ರ ಜನರು ಇಲ್ಲಿ ನಿಮಗೇನೂ ಕಡಿಮೆಯಾಗಿದೆ ಎನ್ನುತ್ತಿದ್ದಾರೆ’ ಎಂದು ತಿಳಿಸಿದರು.

ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ  ನೇಕಾರರ ಸಂಪೂರ್ಣ ಸಾಲಮನ್ನಾ ಮಾಡಿತ್.ತು 3% ಬಡ್ಡಿ ದರದಲ್ಲಿ ಸಾಲವನ್ನು ನೀಡಿತ್ತು ಎಂದರು. ಪ್ರಮುಖರಾದ ಲೋಕಣ್ಣ ಕತ್ತಿ, ಜಾಕೀರ ಅತ್ತಾರ, ವಿರೇಶ ಪಂಚಕಟ್ಟಿಮಠ, ಸಿ.ಎ.ಪಾಟೀಲ, ಕೃಷ್ಣಾ ಸೊಕನಾದಗಿ, ಹೊಳಬಸಪ್ಪ ದಂಡಿನ, ಸಂಗಮೇಶ ಪಲ್ಲೇದ, ಸುರೇಶ ಹುಗ್ಗಿ, ಬಾಳು ಗಡದವರ, ಪ್ರಕಾಶ ಚಿತ್ತರಗಿ, ಹಣಮಂತ ಕುಡಚಿ, ವಿಠ್ಠಲ ಗಿರಿಸಾಗರ,ಗೀರಿಶ ರಕ್ಕಸಗಿ, ಅರುಣ ಮುಧೋಳ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry