ಆಸ್ಟ್ರೇಲಿಯಾ ಯುವತಿ ವರಿಸಿದ ಪಟ್ಟಣದ ಯುವಕ

ಗುರುವಾರ , ಜೂನ್ 27, 2019
26 °C

ಆಸ್ಟ್ರೇಲಿಯಾ ಯುವತಿ ವರಿಸಿದ ಪಟ್ಟಣದ ಯುವಕ

Published:
Updated:

ಬಾಳೆಹೊನ್ನೂರು: ಆಸ್ಟ್ರೇಲಿಯಾ ದೇಶದ ಯುವತಿ ಜತೆಗೆ ಪಟ್ಟಣದ ಯುವಕ ಶುಕ್ರವಾರ ಇಲ್ಲಿಗೆ ಸಮೀಪದ ನಿಡುವಾಳೆ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಸಪ್ತಪದಿ ತುಳಿದರು.

ಪಟ್ಟಣದ ತುಳಸಮ್ಮ ಎ.ಆರ್.ವೆಂಕಟೇಶ್ ಪುತ್ರ ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ಎ.ವಿ.ರಾಜ್‌ ನಾರಾಯಣ್ ಹಾಗೂ ಆಸ್ಟ್ರೇಲಿಯಾ ದೇಶದ ಸಿಡ್ನಿ ಸ್ಯಾಂಡಿ ಚಾಕ್ ಮನ್ ಮತ್ತು ಡಾನ್ ಚಾಕ್‌ ಮನ್ ಪುತ್ರಿ ಲಾರೆನ್ ಚಾಕ್ ಮನ್ ಅವರನ್ನು ಹಿಂದೂ ಧರ್ಮದ ವಿಧಿ ವಿಧಾನಗಳಂತೆ ಪೋಷಕರು ಹಾಗೂ ಸಂಬಂಧಿಗಳ ಸಮ್ಮುಖದಲ್ಲಿ ವಿವಾಹವಾದರು.

ಇಂಗ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ ನೂರಾರು ವಿದೇಶಿಯರು ಮದುವೆಗೆ ಸಾಕ್ಷಿಯಾಗಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry