ಶನಿವಾರ, ಸೆಪ್ಟೆಂಬರ್ 21, 2019
24 °C

‘ಕಾಫಿ ಕೃಷಿ– ಬೆಳೆಗಾರರ ಮಕ್ಕಳು ವಿಮುಖ’

Published:
Updated:
‘ಕಾಫಿ ಕೃಷಿ– ಬೆಳೆಗಾರರ ಮಕ್ಕಳು ವಿಮುಖ’

ಬಾಳೆಹೊನ್ನೂರು: ಕಾಫಿ ಕೃಷಿ ಇಂದು ಲಾಭದಾಯಕ ಉದ್ಯಮವಾಗಿ ಉಳಿಯದೆ ಸಂಕಷ್ಟದಲ್ಲಿದೆ.ಕಾರ್ಮಿಕರ ಸಂಬಳ ದಿನೇ ದಿನೇ ಎರಿಕೆಯಾಗುತ್ತಿದ್ದು ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ.ಇದೆಲ್ಲದರ ಪರಿಣಾಮ ಕಾಫಿ ಬೆಳೆಗಾರರ ಮಕ್ಕಳು ಕಾಫಿ ತೋಟವೇ ಬೇಡ ಎಂದು ಕೃಷಿಯಿಂದ ವಿಮುಖರಾಗುತ್ತಿರುವುದು ವಿಷಾದನೀಯ ಎಂದು ಕಾಫಿ ಬೆಳೆಗಾರ ಬಿ.ಎಲ್.ರಾಮದಾಸ್ ತಿಳಿಸಿದರು.

ಸೀಗೋಡಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರನೇ ಅಂತರ್ ರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಮೊಮ್ಮಕ್ಕಳು ಕಾಫಿ ತೋಟ ನಿಂಗ್ಯಾಕೆ ಅದನ್ನು ಬಿಟ್ಟು ಬೆಂಗಳೂರಿಗೆ ಬಾ ಅಂತಿದ್ದಾರೆ.ನಮ್ಮ ಮಕ್ಕಳಿಗೆ ಉತ್ತಮ ವೈಧ್ಯಕೀಯದಂತಹ ಉನ್ನತ ಮಟ್ಟದ ವಿದ್ಯಾಭ್ಯಾಸ ನೀಡಲು ಸಾಧ್ಯವಾಗುತ್ತಿಲ್ಲ.ಹೋಗಲಿ ಕನಿಷ್ಟ ಕಾರು ಕೊಡಿಸಲು ಆಗುತ್ತಿಲ್ಲ .ಆತ್ಮಹತ್ಯೆ ಮಾಡಿಕೊಂಡ 800 ಬೆಳೆಗಾರರ ಮನೆಗಳಲ್ಲಿ ಮೊಬೈಲ್ ಇರಲಿಲ್ಲ ಎಂದರು.

900 ಜನರ ಮನೆಗಳಲ್ಲಿ ಕನಿಷ್ಟ ಟಿವಿ ಕೂಡ ಇರಲಿಲ್ಲ.ಇಂತಹ ಸ್ಥಿತಿಯಲ್ಲಿ ನಾವಿದ್ದೇವೆ.ಮಲೆನಾಡಿನಲ್ಲಿ ಮಳೆಯ ಕಾರಣ ಮಣ್ಣಿನ ಮೇಲ್ಪದರ ಕೊಚ್ಚಿ ಹೋಗಿ ಸವಕಲಾಗಿದೆ.ಇಂತಹ ಮಣ್ಣಿನಲ್ಲಿ ಉತ್ತಮ ಕಾಫಿ ಬೆಳೆಯಲು ಕೈಗೊಳ್ಳಬೇಕಾದ ಬೇಸಾಯ ಪದ್ದತಿಯನ್ನು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಅಭ್ಯಸಿಸಿ ಸಲಹೆ ನೀಡಬೇಕು ಚಿಕೋರಿ ಬಳಕೆಯನ್ನು ನಿಲ್ಲಿಸಲು ಸಾಧ್ಯವಿಲ್ಲ.ಗುಜರಾತ್ ರಾಜ್ಯದಲ್ಲಿ ಚಿಕೊರಿಯನ್ನು ಬೆಳೆಯಲಾಗುತ್ತಿದ್ದು ಕಾಫಿಯೊಂದಿಗೆ ನಿಗದಿತ ಪ್ರಮಾಣದಲ್ಲಿ ಅದರ ಬಳಕೆ ಅಗತ್ಯ ಇದೆ ಎಂದರು.

ಕಾಫಿ ಮಂಡಳಿ ಸದಸ್ಯ ಮಹಾಬಲ ಮಾತನಾಡಿ,ಚಿಕ್ಕಮಗಳೂರು ಜಿಲ್ಲೆಗೆ 2015–16ರಲ್ಲಿ ಕಾಫಿ ಉಧ್ಯಮಕ್ಕೆ ನೀಡಬೇಕಾಗಿದ್ದ ಕೇಂದ್ರದ ಸಹಾಯಧನ ಈ ಬಾರಿ ಬಿಡುಗಡೆಯಾಗಿದೆ.ಸುಮಾರು 7.5 ಕೋಟಿ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಉಳಿದ ಹಣ ರೈತರಿಗೆ ಸಿಗಲಿದೆ.ವಿಶ್ವದಾದ್ಯಂತ ಕಾಫಿ ಉಧ್ಯಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಅಂತರ ರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ.

ಕಾಫಿಯಲ್ಲಿ ಚಿಕೋರಿ ಬಳಕೆ ಮಿತಿಮೀರಿದ್ದು ಅದನ್ನು ನಿಯಂತ್ರಿಸಿದಲ್ಲಿ ಶುದ್ದ ಕಾಫಿಗೆ ಬೆಲೆ ಎರಲಿದೆ.ಕಾಫಿ ಬೆಳೆ ಕುರಿತು ನಡೆಯುವ ಸಂಶೋಧನೆಗಳು ಬೆಳೆಗಾರರಲ್ಲಿ ವಿಶ್ವಾಸ ಮೂಡಿಸಬೇಕು. ಉದ್ಯಮದಲ್ಲಿ ಕಾರ್ಮಿಕರು,ಮಾರಾಟಗಾರರು ಸೇರಿದಂತೆ ಒಂದು ಕೋಟಿಗೂ ಅಧಿಕ ಜನ ಇದರಲ್ಲಿ ತೊಡಗಿಕೊಂಡಿದ್ದು ಎಲ್ಲರ ಹಿತ ಕಾಯುವ ಮಹತ್ವದ ಜವಾಬ್ದಾರಿ ಸಂಶೋಧನಾ ಕೇಂದ್ರದ ಮೇಲಿದೆ ಎಂದರು.

ಕಾಫಿ ಮಂಡಳಿ ಮಾಜಿ ಸದಸ್ಯ ಎಚ್.ಆರ್.ರಾಜಗೋಪಾಲ್ ಮಾತನಾಡಿ, ಬೆಳೆಗಾರರು ಅಧುನಿಕ ತಂತ್ರಜ್ಞಾನ ಬಳಸಿಕೊಂಡು ಬೇಸಾಯದ ಖರ್ಚನ್ನು ಕಡಿಮೆ ಮಾಡಬೇಕು,ಕಾಫಿ ಸೇವೆನೆಯಿಂದ ಉಲ್ಲಾಸ ಮೂಡುತ್ತದೆ,ಬ್ರಜಿಲ್ ದೇಶದಲ್ಲಿ ಒಂದು ತರಗತಿಯ ವಿದ್ಯಾರ್ಥಿಗಳಿಗೆ ನಾಲ್ಕಾರು ವರ್ಷ ಕಾಫಿ ಮಾತ್ರ ನೀಡ ಅವರ ಚಲನ ವಲನವನ್ನು ಅಭ್ಯಸಿಸಲಾಯಿತು.ಕಾಫಿ ಕುಡಿದ ಮಕ್ಕಳು ಹೆಚ್ಚು ಕ್ರೀಯಾಶೀಲರಾಗಿದ್ದು ಕಂಡು ಬಂತು .ಕಾಫಿ ಕುಡಿಯದ ಮಕ್ಕಳು ಚಟುವಟಿಕೆಗಳಲ್ಲಿ ಹಿಂದುಳಿದಿದ್ದು ಕಂಡುಬಂದಿದೆ.ಕಾಫಿ ಬಳಕೆ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪ್ರಚಾರ ಅಗತ್ಯ ಎಂದರು.

ಸಸ್ಯ ಸಂವರ್ದನೆ ಕುರಿತು ಪ್ರಾತ್ಯಕ್ಷಿತೆ,ಕಾಫಿ ಕಸಿ, ಕುರಿತು ತೋಟದಲ್ಲಿ ವಿಜ್ಷಾನಿಗಳು ಮಾಹಿತಿ ನೀಡಿದರು. .ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಕೆ.ಸುಂದರೇಶ್, ಜಂಟಿ ಸಂಶೋಧನಾ ನಿರ್ದೇಶಕ ಡಾ.ಸಿ.ಜಿ.ಆನಂದ್,ಕೀಟ ಶಾಸ್ತ್ರಜ್ಞ ಡಾ.ಕುರಿಯನ್,ಬೇಸಾಯ ಕೃಷಿ ತಜ್ಞ ಡಾ.ರುದ್ರೇಗೌಡ,ಸಸ್ಯ ಶಾಸ್ತ್ರ ವಿಭಾಗದ ಡಾ.ಸೂರ್ಯಪ್ರಕಾಶ್ ರಾವ್ ,ನಾಗರಾಜ್ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಇದ್ದರು.

Post Comments (+)