ಈ ಹೆದ್ದಾರಿಯಲ್ಲಿ ಗುಂಡಿಗಳದ್ದೇ ಸಮಸ್ಯೆ!

ಸೋಮವಾರ, ಮೇ 27, 2019
24 °C

ಈ ಹೆದ್ದಾರಿಯಲ್ಲಿ ಗುಂಡಿಗಳದ್ದೇ ಸಮಸ್ಯೆ!

Published:
Updated:
ಈ ಹೆದ್ದಾರಿಯಲ್ಲಿ ಗುಂಡಿಗಳದ್ದೇ ಸಮಸ್ಯೆ!

ಕಡೂರು: ಕಡೂರು ಪಟ್ಟಣ ದಿನೇ ದಿನೇ ಬೆಳೆಯುತ್ತಿದ್ದು ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಪಟ್ಟಣದ ಒಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಗುಂಡಿಗಳದ್ದೇ ದೊಡ್ಡ ಸಮಸ್ಯೆಯಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ.

ಈ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವಲ್ಲಿ ಸಿಗುವ ವಿಶ್ವನಾಥ ಸರ್ಕಲ್ ಬಳಿ ಪ್ರಯಾಣಿಕರ ತಂಗುದಾಣವಿದೆ. ಸದಾ ಜನದಟ್ಟಣೆಯಿಂದ ಕೂಡಿರುವ ಈ ಜಾಗದಲ್ಲಿ  ಬೆಳಗಿನ ಹೊತ್ತು ತರಕಾರಿ ಸೊಪ್ಪಿನ ವಹಿವಾಟು ನಡೆಯುತ್ತದೆ. ಸದಾ ಜನರಿಂದ ಗಿಜಿಗುಡುತ್ತಿರುವ ಇಲ್ಲಿಗೆ ಅನತಿ ದೂರದಲ್ಲಿ ಸಾರ್ವಜನಿಕ ಆಸ್ಪತ್ರೆ ಇದೆ. ವೃತ್ತದ ಎಡಗಡೆಗೆ ನ್ಯಾಯಾಲಯದ ಸಂಕೀರ್ಣವಿದೆ. ಈ ಜಾಗದಲ್ಲಿ ರಸ್ತೆಯಲ್ಲಿ ಗುಂಡಿಗಳು ತುಂಬಿದ್ದು ಅಫಘಾತದ ಸಾದ್ಯತೆಗಳು ಹೆಚ್ಚಿವೆ.

ಇಲ್ಲಿ ಇರುವ ಬಸ್ ತಂಗುದಾಣದ ಮುಂದೆ ದೊಡ್ಡ ಗುಂಡಿಯಾಗಿ ಸುಮಾರು 4 ತಿಂಗಳು ಕಳೆದಿವೆ. ಸರ್ಕಾರಿ ಬಸ್ ಗಳು ಈ ಗುಂಡಿಯ ಪಕ್ಕ ಹೆದ್ದಾರಿಯಲ್ಲೇ ಪ್ರಯಾಣಿಕರನ್ನು ಇಳಿಸುತ್ತವೆ. ಆಗ ಆ ಬಸ್ ಹೊರಡುವ ತನಕ ವಾಹನಗಳು ನಿಲ್ಲುತ್ತವೆ. ಮಳೆ ಬಂದ ಸಮಯದಲ್ಲಿ ಈ ಗುಂಡಿಗಳು ನೀರು ತುಂಬಿದಾಗ ಅಲ್ಲಿ ಗುಂಡಿಯಿರುವುದು ತಿಳಿಯುವುದಿಲ್ಲ. ವೇಗವಾಗಿ ಬರುವ ದ್ವಿಚಕ್ರವಾಹನಗಳ ಸವಾರರಿಗೆ ಈ ಗುಂಡಿಯಲ್ಲಿ ಬಿದ್ದ ನಂತರವೇ ತಿಳಿಯುವುದು.

ಇದೇ ಹೆದ್ದಾರಿಯಲ್ಲಿರುವ ಮೆಸ್ಕಾಂ ವಿಭಾಗೀಯ ಕಚೇರಿಯ ಮುಂದೆಯೂ ಇದೇ ಪರಿಸ್ಥಿತಿ ಇದೆ. ಮಳೆ ಬಂದರೆ ಕೆರೆ ಯೋಪಾದಿಯಲ್ಲಿ ನಿಲ್ಲವ ನೀರಿನಲ್ಲೇ ವಾಹನಗಳು ಚಲಿಸುತ್ತವೆ. ಅದರೊಳಗಿನ ಗುಂಡಿಗೆ ದ್ವಿಚಕ್ರ ವಾಹನಗಳ ಸವಾರರು ಬಿದ್ದ ಅನೇಖ ಉದಾಹರಣೆಗಳಿವೆ.

ಈ ಹೆದ್ದಾರಿ ನಿರ್ವಹಣೆ ಮಾಡದಿರುವುದು ಸಾರ್ವಜನಿಕರಿಗೆ ಅತೀವ ತೊಂದರೆಯಾಗಿದೆ. ಕಡೇಪಕ್ಷ  ಇಲ್ಲಿನ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚುವ ಕಾರ‍್ಯವನ್ನು ಪುರಸಭೆಯವರು ಅಥವಾ ಲೋಕೋಪಯೋಗಿ ಇಲಾಖೆ ಮಾಡಬಹುದಾಗಿದೆ ಎಂಬುದು ಸಾರ್ವಜನಿಕ ಅಬಿಪ್ರಾಯವಾಗಿದೆ.

ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಗಾಗಿ ಪ್ರಾದಿಕಾರವೇ ಇದೆ. ಅವರ ಗಮನಕ್ಕೆ ಇದು ಬಂದಿಲ್ಲ.ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಗುಂಡಿಗಳನ್ನು ಮಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ‌ಮಂಜಪ್ಪ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry