ಶಿಲಾಬಾಲಿಕೆಯರು

ಸೋಮವಾರ, ಜೂನ್ 17, 2019
27 °C

ಶಿಲಾಬಾಲಿಕೆಯರು

Published:
Updated:
ಶಿಲಾಬಾಲಿಕೆಯರು

ಹೇಮಲತಾ ವಸ್ತ್ರದ

ಶಿಲ್ಪದಲಿ ಬೆತ್ತಲಾದವರು ನಾವು ಶಿಲಾಬಾಲಿಕೆಯರು

ಬಯಲಿನಲಿ ಬಯಲಾದವರು ನಾವು ಶಿಲಾಬಾಲಿಕೆಯರು

ಇಂಚಿಂಚೂ ಕಣಕಣವೂ ಬಯಲಿಗೆ ಇಟ್ಟರು

ನಮ್ಮತನದ ಗುಟ್ಟಿಲ್ಲದವರು ನಾವು ಶಿಲಾಬಾಲಿಕೆಯರು

ಘಮವಿಲ್ಲ ನಮ್ಮ ಎದೆ ಹಾಲಿಗೆ, ಬರಿ ನಿಮ್ಮ

ಸ್ಖಲನಗಳಿಗೆ ಸಾಕ್ಷಿಯಾದವರು ನಾವು ಶಿಲಾಬಾಲಿಕೆಯರು

ಮೈಯೆಲ್ಲಾ ಮೈಥುನದ ವಾಸನೆ, ಹಸಿದ ಕಂಗಳಿಗೆ ಆಹಾರವಾದವರು ನಾವು ಶಿಲಾಬಾಲಿಕೆಯರು

 

ಯುಗ ಯುಗಗಳಿಂದ ಸೀರೆ ಸೆಳೆಸಿಕೊಳ್ಳುತ್ತಲೇ

ಇರುವ ದ್ರೌಪದಿಯರು ನಾವು ಶಿಲಾಬಾಲಿಕೆಯರು

ನೋಟದಗ್ನಿಯಲಿ ಬೇಯುತ್ತ ಅವಮಾನಿತರಾಗುತ್ತಲೇ

ಇರುವ ಸೀತೆಯರು ನಾವು ಶಿಲಾಬಾಲಿಕೆಯರು

ನಿಮ್ಮ ವಿಕೃತಿಗೆ ಸಿಡಿದು ಭಗ್ನರಾದರೂ

ಹೇಮನಗುವ ನೀಡಿದವರು ನಾವು ಶಿಲಾಬಾಲಿಕೆಯರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry