ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಕೋಡಂಬಹಳ್ಳಿ, ಕೊಂಡಾಪುರ ಕೆರೆ ಭರ್ತಿ

Last Updated 7 ಅಕ್ಟೋಬರ್ 2017, 9:59 IST
ಅಕ್ಷರ ಗಾತ್ರ

ಕೋಡಂಬಹಳ್ಳಿ (ಚನ್ನಪಟ್ಟಣ): ತಾಲ್ಲೂಕಿನ ಕೋಡಂಬಹಳ್ಳಿ ಕೆರೆಯು ಭರ್ತಿಯಾಗಿ ಕೋಡಿ ಹರಿದಿದ್ದು, ಈ ಭಾಗದ ಜನರು ಹರ್ಷಗೊಂಡಿದ್ದಾರೆ. ಕಣ್ವ ಏತ ನೀರಾವರಿ ಯೋಜನೆಯಿಂದ ಈ ಕೆರೆಗೆ ಕಳೆದ ಎಂಟ್ಹತ್ತು ದಿನಗಳಿಂದ ನೀರು ಹರಿಸಲಾಗಿದ್ದು, ಕೆರೆಯು ಗುರುವಾರ ಭರ್ತಿಯಾಗಿ ಕೋಡಿ ಹರಿದಿದೆ.

2015 ರಲ್ಲಿ ಎರಡು ಬಾರಿ ಕಣ್ವ ಏತ ನೀರಾವರಿ ಯೋಜನೆಯಿಂದ ಪೈಪ್ ಲೈನ್ ಮೂಲಕ ಹರಿಸಿದ್ದ ನೀರಿನಲ್ಲಿ ಭರ್ತಿಯಾಗಿತ್ತು. ಕಳೆದ ವರ್ಷ ಖಾಲಿಯಾಗಿಯೇ ಇದ್ದ ಕೆರೆಗೆ ಈ ಬಾರಿ ಇಗ್ಗಲೂರು ಎಚ್.ಡಿ.ದೇವೇಗೌಡ ಬ್ಯಾರೇಜ್ ಭರ್ತಿಯಾದ ಬಳಿಕ ನೀರಿ ಹರಿಸಲಾಯಿತು.

ಈ ಭಾಗದಲ್ಲಿ ಒಂದು ತಿಂಗಳಿಂದ ಉತ್ತಮ ಮಳೆಯಾಗುತ್ತಿದೆ. ಸಣ್ಣಪುಟ್ಟ ಕಟ್ಟೆಗಳು, ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಆದರೂ ಕೆರೆಗೆ ಅಲ್ಪಸ್ವಲ್ಪ ನೀರು ಬಂದಿತ್ತು. ಈಗ ಏತ ನೀರಾವರಿಯ ಮೋಟಾರ್ ಚಾಲನೆ ಮಾಡಿದ ನಂತರ ಕೋಡಿ ಬಿದ್ದಿದೆ.

ಈ ಕೆರೆಯು ಕೋಡಂಬಹಳ್ಳಿ, ಕೊಂಡಾಪುರ, ಹುಚ್ಚಯ್ಯನದೊಡ್ಡಿ, ಅಂಚೀಪುರ, ವಡ್ಡರಹಳ್ಳಿ, ಬಾಚಹಳ್ಳಿ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಗೆ ಬರಲಿದ್ದು, ಈ ಭಾಗದ ರೈತರು ಸಂತಸಗೊಂಡಿದ್ದಾರೆ.

ಕೊಂಡಾಪುರ ಕೆರೆ ಭರ್ತಿ: ಇದೇ ವ್ಯಾಪ್ತಿಯ ತಾಲ್ಲೂಕಿನ ಕೊಂಡಾಪುರ ಗ್ರಾಮದ ಸಣ್ಣಕೆರೆಯು ಕಣ್ವ ಏತ ನೀರಾವರಿ ಯೋಜನೆಯಿಂದ ಭರ್ತಿಯಾಗಿ ಕೋಡಿ ಹರಿದಿದೆ.
ಕೋಡಂಬಹಳ್ಳಿ ಕೆರೆಗೆ ನೀರು ಹರಿಸುವ ಪೈಪ್ ಲೈನ್ ನಲ್ಲಿಯೆ ಕೊಂಡಾಪುರ ಕೆರೆಗೂ ನೀರು ಹರಿಸಲಾಗುತ್ತಿದ್ದು, ಈ ಕೆರೆಯೂ ಭರ್ತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT