ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಳು ಮತ್ತು ಪುಟ್ಟಿ

Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಮ್ಮ ಬಂದಳು ಗೌರಿ ಮನೆಗೆ‌
ರೊಟ್ಟಿಯ ತಾರಮ್ಮ

ಸಗಣಿಯ ಹಾಕಿದೆ ಬಾಚುವೆ ಅದನು
ಗೊಬ್ಬರವದುವೆ ತಾನಮ್ಮ

ಕೆಚ್ಚಲು ತುಂಬಿದೆ ಕರುವು ಕಾದಿದೆ
ಪಾತ್ರೆಯ ಸಪ್ಪಳ ಮಾಡದಿರು

ಕುಡಿಯಲಿ ಮೊದಲದು ಹೊಟ್ಟೆಯ ತುಂಬಾ
ಬಳಿಕವೆ ಕರಿಯುವ ಹಾಲನ್ನು

ಏಟು ಚೆಂದ ಕಾಣುವುದಮ್ಮ
ನಮ್ಮ ಆಕಳ ಕರು ಮರಿ

ಬಿಳಿ ಬಿಳಿ ಬಣ್ಣ ಹೊಳೆಯುವುದಮ್ಮ
ಹಾಲಿನ ಥರದೇ ಈ ಮರಿ

ಬಹಳವೇ ಇಷ್ಟ ನನಗೆ ಗೌರಿ
ನೆಕ್ಕುತ ಪ್ರೀತಿಯ ತೋರುವಳು

ನೀನು ಅಷ್ಟೆ ಅಚ್ಚು ಮೆಚ್ಚು
ಪ್ರೀತಿಯ ನೀಡುವ ಅಮ್ಮಯ್ಯ

ಹೊಟ್ಟೆಯು ಹಸಿದಿದೆ
ತುತ್ತನು ತಾರೆ ದಮ್ಮಯ್ಯ

–ಕೃಷ್ಣ ಶ್ರೀಕಾಂತ ದೇವಾಂಗಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT