ಯಾದಗಿರಿ ಸುತ್ತಮುತ್ತ ಜೋರು ಮಳೆ

ಸೋಮವಾರ, ಜೂನ್ 17, 2019
25 °C

ಯಾದಗಿರಿ ಸುತ್ತಮುತ್ತ ಜೋರು ಮಳೆ

Published:
Updated:

ಯಾದಗಿರಿ: ನಗರದ ಸುತ್ತಮುತ್ತ ಶುಕ್ರವಾರ ರಾತ್ರಿ ಗುಡುಗು ಸಹಿತ ಜೋರು ಮಳೆಯಾಗಿದೆ. ಜಿಲ್ಲೆಯಲ್ಲಿನ ಸುರಪುರ ಹಾಗೂ ಶಹಾಪುರ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ.

ಯಾದಗಿರಿ ಸಮೀಪದ ನಾಯ್ಕಲ್, ಹುಲ್‌ಕಲ್ (ಜೆ), ಗುರಸುಣಗಿ, ಖಾನಾಪುರ, ಹತ್ತಿಕುಣಿ, ಬಂದಳ್ಳಿ, ಮುಂಡರಗಿ, ಹೊಸಳ್ಳಿ, ವರ್ಕನಹಳ್ಳಿ ಗ್ರಾಮಗಳಲ್ಲಿ ರಾತ್ರಿ 8ಕ್ಕೆ ಆರಂಭಗೊಂಡ ಮಳೆ ಸತತ 8.30ರ ವರೆಗೆ ಸುರಿದಿದೆ.

ಯಾದಗಿರಿಯ ಬಸವೇಶ್ವರ ನಗರ, ವಿವೇಕಾನಂದ ನಗರ, ಲಕ್ಷ್ಮೀ ನಗರ, ಕೋಲಿವಾಡ, ಮೈಲಾಪುರ ಅಗಸಿ, ಮುಸ್ಲಿಂಪುರ ಬಡಾವಣೆಗಳಲ್ಲಿನ ಚರಂಡಿಗಳು ಉಕ್ಕಿ ರಸ್ತೆಗೆ ಹರಿದವು. ಇದರಿಂದ ಜನ ಸಂಚಾರಕ್ಕೆ ತೊಂದರೆ ಉಂಟಾಯಿತು. ಕಾಯಿಪಲ್ಯೆ ಮಾರುಕಟ್ಟೆ ರಸ್ತೆಗಳಲ್ಲಿ ಹತ್ತಾರು ಬೃಹತ್‌ ತಗ್ಗುಗಳು ತುಂಬಿದ್ದರಿಂದ ಜನರು ಸಂಚಾರಕ್ಕೆ ಪರದಾಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry