ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಮುಂದಿನ ಎರಡು ವರ್ಷ ಟೀಂ ಇಂಡಿಯಾ ಪರ ಆಡಲು ಬಯಸುತ್ತೇನೆ: ಆಶಿಶ್‌ ನೆಹ್ರಾ

Published:
Updated:
ಮುಂದಿನ ಎರಡು ವರ್ಷ ಟೀಂ ಇಂಡಿಯಾ ಪರ ಆಡಲು ಬಯಸುತ್ತೇನೆ: ಆಶಿಶ್‌ ನೆಹ್ರಾ

ರಾಂಚಿ: 38 ವರ್ಷದ ಕ್ರಿಕೆಟಿಗ ಆಶಿಶ್‌ ನೆಹ್ರಾ ಮುಂದಿನ ಎರಡು ವರ್ಷ ಕಾಲ ಟೀಂ ಇಂಡಿಯಾ ಪರ ಆಡುವುದಾಗಿ ಹೇಳಿದ್ದಾರೆ.

ಶನಿವಾರ ರಾಂಚಿಯ ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಭಾರತ – ಆಸ್ಟ್ರೇಲಿಯಾ ನಡುವಣ ಟಿ–20 ಸರಣಿಗೆ ನೆಹ್ರಾ ಸ್ಥಾನ ಪಡೆದಿದ್ದಾರೆ.

‘ಖಾಸಗಿ ವಾಹಿನಿವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಮುಂದಿನ ಕೆಲವು ವರ್ಷಗಳು ಟಿಂ ಇಂಡಿಯಾ ಪರ ಆಡಲು ಬಯಸುತ್ತೇನೆ. ಆದರೆ, 38 –39 ವರ್ಷ ವಯಸ್ಸಾದ ಮೇಲೆ ವೇಗದ ಬೌಲರ್‌ಗಳಿಗೆ ಕಷ್ಟವೆನಿಸುವುದು ನಿಜ. ತಂಡದಲ್ಲಿ ಸ್ಥಾನ ಪಡೆಯಲು ಶ್ರಮವಹಿಸುತ್ತೇನೆ’ ಎಂದಿದ್ದಾರೆ. 

‘ನನ್ನ ಕಾಲಿನ ಪಾದಕ್ಕೆ ನಾಲ್ಕು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಆದರೂ ತಂಡದ ಪರ ಆಡಲು ನಾನು ಸಿದ್ಧನಾಗಿದ್ದೇನೆ’ ಎಂದಿದ್ದಾರೆ.

Post Comments (+)