ಬೆಂಗಳೂರಿನಲ್ಲಿ ಬಿರುಸಿನ ಮಳೆ ಆರಂಭ; ಹಲವೆಡೆ ಟ್ರಾಫಿಕ್‌ ಜಾಮ್‌

ಬುಧವಾರ, ಜೂನ್ 26, 2019
25 °C

ಬೆಂಗಳೂರಿನಲ್ಲಿ ಬಿರುಸಿನ ಮಳೆ ಆರಂಭ; ಹಲವೆಡೆ ಟ್ರಾಫಿಕ್‌ ಜಾಮ್‌

Published:
Updated:
ಬೆಂಗಳೂರಿನಲ್ಲಿ ಬಿರುಸಿನ ಮಳೆ ಆರಂಭ; ಹಲವೆಡೆ ಟ್ರಾಫಿಕ್‌ ಜಾಮ್‌

ಬೆಂಗಳೂರು: ಬೆಂಗಳೂರಿನಲ್ಲಿ ಶನಿವಾರ ಮಳೆ ಮತ್ತೆ ಆರ್ಭಟಿಸಲು ಆರಂಭಿಸಿದ್ದು ಹಲವೆಡೆ ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನ ದಟ್ಟಣೆ ಹೆಚ್ಚಿದೆ.

ಭಾರಿ ಮಳೆಗೆ ನಗರದ ಕಾವೇರಿ ಜಂಕ್ಷನ್‌, ಮೇಕ್ರಿ ವೃತ್ತ, ಹೆಬ್ಬಾಳದಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ.

ಶನಿವಾರವಾದ್ದರಿಂದ ವಾಹನಗಳು ವಿರಳವಾಗಿವೆಯಾದರೂ ಸಂಜೆ ವೇಳೆಗೆ ವಾರಂತ್ಯದ ಸುತ್ತಾಟಕ್ಕೆ ತೆರಳುವ ಜನರಿಗೆ ತಡೆಯೊಡ್ಡಿದೆ.

ಮೂರು ದಿನಗಳಿಂದ ಅಬ್ಬರಿಸುತ್ತಿರುವ ಮಳೆಗೆ ರಸ್ತೆಗಳೆ ರಾಜಕಾಲುವೆಯಂತಾಗಿ ಮಾರ್ಪಟ್ಟಿವೆ.

ಹೊಸೂರು ರಸ್ತೆಯಲ್ಲಿ ನೀರು ತುಂಬಿದ್ದು, ಜನರು ಅದರಲ್ಲೆ ಸಂಚರಿಸುತ್ತಿದ್ದಾರೆ.

ಕಮರ್ಶಿಯಲ್‌ ಸ್ಟ್ರೀಟ್‌, ಶಿವಾಜಿನಗರ ಬಸ್‌ನಿಲ್ದಾಣ, ಆರ್‌ಎಂಎಸ್‌, ಎಂಕೆ ರಸ್ತೆಗಳಲ್ಲಿ ವಾರಾಂತ್ಯದ ವಹಿವಾಟಿಗೆ ಮಳೆ ಅಡ್ಡಿಯಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry