ನನ್ನ ಮರ್ಯಾದೆ ಕಳಿಬ್ಯಾಡ್ರೀ..!

ಬುಧವಾರ, ಜೂನ್ 19, 2019
23 °C

ನನ್ನ ಮರ್ಯಾದೆ ಕಳಿಬ್ಯಾಡ್ರೀ..!

Published:
Updated:
ನನ್ನ ಮರ್ಯಾದೆ ಕಳಿಬ್ಯಾಡ್ರೀ..!

ವಿಜಯಪುರ: ‘ನಿಮ್ಮನ್ನು ನಂಬ್ಕೊಂಡು ಮಾತ್ ಕೊಟ್ಟಿವ್ನೀ. ನನ್ನ ಮರ್ಯಾದೆ ಕಳಿಬ್ಯಾಡ್ರೀ. ನಿಗದಿತ ದಿನದೊಳಗೆ ರಸ್ತೆ ನಿರ್ಮಿಸಿ...’

ವಿಜಯಪುರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಕೆಬಿಜೆಎನ್‌ಎಲ್‌ ಅಧಿಕಾರಿಗಳಿಗೆ ತಾಕೀತು ಮಾಡಿದ ಪರಿಯಿದು.

ವಿಜಯಪುರ ತಾಲ್ಲೂಕಿನ ಕಾತ್ರಾಳ ಗ್ರಾಮಕ್ಕೆ ಕಾಲುವೆ ಪಕ್ಕ ಸಮರ್ಪಕ ರಸ್ತೆ ಇಲ್ಲದಿರುವುದರಿಂದ ಬಸ್ ಸಂಚಾರ ಆರಂಭಿಸಲು ಇದೂವರೆಗೂ ಸಾಧ್ಯವಾಗಿಲ್ಲ ಎಂದು ಎನ್‌ಇಕೆಆರ್‌ಟಿಸಿ ಅಧಿಕಾರಿಗಳು ತಿಳಿಸುತ್ತಿದ್ದಂತೆ, ಸಚಿವರು ಕೆಬಿಜೆಎನ್‌ಎಲ್‌ ಅಧಿಕಾರಿಗಳಿಗೆ ತುರ್ತಾಗಿ ರಸ್ತೆ ನಿರ್ಮಿಸುವಂತೆ ಆದೇಶಿಸಿದರು.

ಸಚಿವರ ಸೂಚನೆಗೆ ಅಧಿಕಾರಿ ಸಮ್ಮತಿ ವ್ಯಕ್ತಪಡಿಸುತ್ತಿದ್ದಂತೆ, ಮುಂಬರುವ ಜ.1ರೊಳಗೆ ರಸ್ತೆ ನಿರ್ಮಿಸಿ. ಎನ್‌ಇಕೆಆರ್‌ಟಿಸಿ ಅಧಿಕಾರಿಗಳು ಬಸ್‌ ಸಂಚಾರ ಆರಂಭಿಸಲಿದ್ದಾರೆ ಎಂಬ ಗಡುವನ್ನು ನಿಗದಿ ಪಡಿಸಿದರು.

ಇದಕ್ಕೆ ಎರಡೂ ಇಲಾಖೆ ಅಧಿಕಾರಿಗಳು ಆಗಲಿ ಸರ್‌ ಎನ್ನುತ್ತಿದ್ದಂತೆ, ಸಚಿವರು ‘ಇನ್ನೂ ಮೂರ್‌ ತಿಂಗ್ಳು ಟೈಮಿದೆ. ಅಷ್ಟರೊಳಗೆ ರಸ್ತೆ ನಿರ್ಮಿಸಿ. ಮಾಧ್ಯಮದವರು ಇಲ್ಲೇ ಇದ್ದಾರೆ. ಜನವರಿ 1ರಂದು ಬಸ್‌ ಸಂಚಾರ ಆರಂಭಗೊಳ್ಳದಿದ್ದರೆ, ‘ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ’ ಎಂದು ಬರೆದು ನನ್ನ ಮರ್ಯಾದೆ ಹರಾಜಾಕ್ತಾರೆ ಎಂಬುದು ನೆನಪಿರಲಿ’ ಎನ್ನುತ್ತಿದ್ದಂತೆ ಸಭೆ ನಗೆಗಡಲಲ್ಲಿ ತೇಲಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry