ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 8–10–1967

50 ವರ್ಷಗಳ ಹಿಂದೆ
Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಮ್ಮಿಶ್ರ ಸರ್ಕಾರಗಳ ರಚನೆಯಲ್ಲಿ ಕಾಂಗ್ರೆಸ್ ಪಾತ್ರ ಕುರಿತು ಒತ್ತಾಯ ಮಾಡುವ ಸಂಭವ

ನವದೆಹಲಿ, ಅ. 7– ರಾಜ್ಯಗಳ ಸಮ್ಮಿಶ್ರ ಸರಕಾರಗಳಲ್ಲಿ ಕಾಂಗ್ರೆಸ್ ಪಕ್ಷವು ಭಾಗವಹಿಸುವುದನ್ನು ಹಾಗೂ ಬೆಂಬಲ ಕೊಡುವುದನ್ನು ನಿರ್ಧರಿಸುವ ಖಚಿತವಾದ ತತ್ವಗಳನ್ನು, ನೀತಿಗಳನ್ನು ಮತ್ತು ಕಾರ್ಯವಿಧಾನಗಳನ್ನು ರೂಪಿಸಬೇಕೆಂದು ಮುಂಬರುವ ಜಬ್ಬಲ್ಪುರದ ಎ.ಐ.ಸಿ.ಸಿ. ಅಧಿವೇಶನದಲ್ಲಿ ಕಾಂಗ್ರೆಸ್ ಸಮಾಜವಾದಿ ವೇದಿಕೆ ಒತ್ತಾಯಪಡಿಸುವುದು.

ಈ ವಿಷಯದಲ್ಲಿ ತತ್ವಗಳನ್ನು ಮತ್ತು ನೀತಿಗಳನ್ನು ರೂಪಿಸುವುದಕ್ಕಾಗಿ ಸಮಿತಿಯೊಂದನ್ನು ನೇಮಕ ಮಾಡುವಂತೆ ಸಮಾಜವಾದಿ ವೇದಿಕೆಯು ಖಾಸಗಿ ನಿರ್ಣಯವೊಂದರಲ್ಲಿ ಸಲಹೆ ಮಾಡಲಿದೆ.

**

ಯಾವುದೇ ಪ್ರಾದೇಶಿಕ ದುರಾಶೆ ಭಾರತಕ್ಕಿಲ್ಲ: ರಾಷ್ಟ್ರಪತಿ ಘೋಷಣೆ

ಟೇಕನ್‌ಪುರ (ಮಧ್ಯಪ್ರದೇಶ), ಅ. 7– ‘ಭಾರತಕ್ಕೆ ಯಾವುದೇ ಪ್ರಾದೇಶಿಕ ದುರಾಶೆ ಇಲ್ಲ. ಅಂತೆಯೇ ಗಡಿ ಪ್ರದೇಶದಲ್ಲಿ ಬಿಕ್ಕಟ್ಟನ್ನುಂಟುಮಾಡುವ ಅಪೇಕ್ಷೆಯೂ ಭಾರತಕ್ಕಿಲ್ಲ’ ಎಂದು ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ ಅವರು ಇಂದು ಇಲ್ಲಿ ಘೋಷಿಸಿದರು.

‘ಗಡಿ ಪ್ರದೇಶದಲ್ಲಿ ಶಾಂತಿ ಶಿಸ್ತು ಪಾಲನೆಯಾಗಿ ಅಲ್ಲಿನ ನಿವಾಸಿಗಳಿಗೆ ಭದ್ರತೆ ಮತ್ತು ರಕ್ಷಣೆಯನ್ನೊದಗಿಸುವುದೇ ನಮ್ಮ ಗುರಿ’ ಎಂದೂ ಅವರು ಇಲ್ಲಿ (ಗ್ವಾಲಿಯರ್‌ಗೆ 20 ಮೈಲಿ ದೂರದಲ್ಲಿ) ಗಡಿ ರಕ್ಷಣಾ ಪಡೆಗಳ ಆಕಾಡೆಮಿಯ ಸೈನಿಕರು ಮತ್ತು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT