ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌.ಜಿ.ರಮೇಶ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ

Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಅವರನ್ನು ರಾಜ್ಯ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ(ಸಿ.ಜೆ) ನೇಮಕ ಮಾಡಲಾಗಿದೆ.

ರಮೇಶ್‌ ಅವರು ಸದ್ಯ ಕರ್ನಾಟಕ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿ. ಇದೇ 10ರಿಂದ ಅವರು ಹಂಗಾಮಿ ಸಿ.ಜೆ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಹಾಲಿ ಸಿ.ಜೆ ಸುಬ್ರೊ ಕಮಲ್‌ ಮುಖರ್ಜಿ ಇದೇ 9ರಂದು ನಿವೃತ್ತಿಯಾಗುತ್ತಿದ್ದಾರೆ.

ಬೀಳ್ಕೊಡುಗೆ ಇಲ್ಲ: ‘ಮುಖರ್ಜಿ ಅವರ ಆಡಳಿತಾವಧಿಯಲ್ಲಿ ರಾಜ್ಯ ನ್ಯಾಯಾಂಗ ವ್ಯವಸ್ಥೆ ಕುಸಿದಿದೆ’ ಎಂದು ಆರೋಪಿಸಿರುವ ರಾಜ್ಯ ವಕೀಲರ ಪರಿಷತ್‌, ‘ಮುಖರ್ಜಿ ಅವರಿಗೆ ಅಧಿಕೃತ ಬೀಳ್ಕೊಡುಗೆ ನೀಡುತ್ತಿಲ್ಲ’ ಎಂದು ಪರಿಷತ್‌ ಸಹ ಕಾರ್ಯದರ್ಶಿ ವೈ.ಆರ್.ಸದಾಶಿವ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿಯೂ ಮುಖರ್ಜಿ ಅವರಿಗೆ ಬೀಳ್ಕೊಡುಗೆ ನೀಡದಿರಲು ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT