ಅವ್ಯವಹಾರ ಬಯಲು ಮಾಡಿದ್ದಕ್ಕೆ ಸನಾತನ ಸಂಸ್ಥೆ ವಿರುದ್ಧ ಹತ್ಯೆ ಆರೋಪ

ಸೋಮವಾರ, ಜೂನ್ 24, 2019
26 °C

ಅವ್ಯವಹಾರ ಬಯಲು ಮಾಡಿದ್ದಕ್ಕೆ ಸನಾತನ ಸಂಸ್ಥೆ ವಿರುದ್ಧ ಹತ್ಯೆ ಆರೋಪ

Published:
Updated:
ಅವ್ಯವಹಾರ ಬಯಲು ಮಾಡಿದ್ದಕ್ಕೆ ಸನಾತನ ಸಂಸ್ಥೆ ವಿರುದ್ಧ ಹತ್ಯೆ ಆರೋಪ

ಬೆಂಗಳೂರು: ‘ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪಾನ್ಸರೆ ಅವರ ಅವ್ಯವಹಾರಗಳನ್ನು ಸನಾತನ ಸಂಸ್ಥೆಯು ಬಯಲಿಗೆಳೆದಿತ್ತು. ಇದೇ ಕಾರಣಕ್ಕೆ ಅವರ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಕೈವಾಡವಿದೆ ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ಮುಂಬೈನ ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷ ವೀರೇಂದ್ರ ಇಚಲಕರಂಜಿಕರ್ ಆರೋಪಿಸಿದರು.

ನಗರದಲ್ಲಿ ಶನಿವಾರ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಾಭೋಲ್ಕರ್ ನೇತೃತ್ವದ ಅಂಧ ಶ್ರದ್ಧಾ ನಿರ್ಮೂಲನಾ ಸಮಿತಿ ಹಾಗೂ ಪರಿವರ್ತನಾ ಸಂಘ ಆರ್ಥಿಕ ವ್ಯವಹಾರಗಳ ಬಗ್ಗೆ 10 ವರ್ಷಗಳಿಂದ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರಲಿಲ್ಲ. ಈ ಬಗ್ಗೆ ಸನಾತನ ಸಂಸ್ಥೆಯು ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಆ ಬಗ್ಗೆ ತನಿಖೆ ನಡೆದಾಗ ಸುಮಾರು ₹ 7.5 ಕೋಟಿಯಷ್ಟು ಅವ್ಯವಹಾರ ನಡೆಸಿದ್ದು ಬಯಲಾಗಿತ್ತು’ ಎಂದು ಹೇಳಿದರು.

‘ನಕ್ಸಲರ ಜತೆಗೆ ಸಂಪರ್ಕ ಹೊಂದಿದ್ದ ಸಂಘಗಳ ಬಗ್ಗೆ ಮಹಾರಾಷ್ಟ್ರ ಸರ್ಕಾರ ಪಟ್ಟಿ ಸಿದ್ಧಪಡಿಸಿತ್ತು. ಅವರ ಹತ್ಯೆ ಹಿಂದೆ ನಕ್ಸಲರ ಕೈವಾಡವೂ ಇರಬಹುದು. ಆ ನಿಟ್ಟಿನಲ್ಲಿ ಏಕೆ ತನಿಖೆ ನಡೆಯುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಪಾನ್ಸರೆ ಅವರು ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ₹ 40 ಲಕ್ಷ ಠೇವಣಿ ಇಟ್ಟಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿರಲಿಲ್ಲ. ಅದನ್ನೂ ಸನಾತನ ಸಂಸ್ಥೆ ಬಯಲಿಗೆಳೆದಿತ್ತು. ಅಷ್ಟಕ್ಕೆ, ಸನಾತನ ಸಂಸ್ಥೆಯ ಕಾರ್ಯಕರ್ತರ ವಿರುದ್ಧ ಕೊಲೆ ಆರೋಪ ಮಾಡಲಾಗುತ್ತಿದೆ. ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲೂ ಯಾವುದೇ ಸಾಕ್ಷ್ಯಾಧಾರವಿಲ್ಲದೆ ಸಂಸ್ಥೆಯ ವಿರುದ್ಧ ಆರೋಪಿಸಲಾಗುತ್ತಿದೆ’ ಎಂದು ದೂರಿದರು.

‘ಕ್ರೈಸ್ತ ಧರ್ಮ ಪ್ರಚಾರಕರು, ಜಿಹಾದಿಗಳು ಹಾಗೂ ಕಮ್ಯುನಿಸ್ಟರು ಒಂದಾಗಿ ಭಾರತವನ್ನು ಒಡೆಯಲು ಷಡ್ಯಂತ್ರ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೆ ದೇಶವನ್ನು ವಿಭಜಿಸಲು ಸಾಧ್ಯವಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಂಘ ಪರಿವಾರದ ಕೈವಾಡವಿದೆ ಎಂದು ಎಡಪಂಥಿಯ ಮುಖಂಡರು ಆರೋಪ ಮಾಡುತ್ತಿದ್ದಾರೆ. ಅವರಲ್ಲೂ ಕೌಟುಂಬಿಕ ಕಲಹವಿತ್ತು. ಜತೆಗೆ ನಕ್ಸಲರೊಂದಿಗೆ ಸಂಪರ್ಕ ಹೊಂದಿದ್ದರು. ಆ ನಿಟ್ಟಿನಲ್ಲಿ ಏಕೆ ತನಿಖೆ ನಡೆಯುತ್ತಿಲ್ಲ. ಸಂಘ ಪರಿವಾರದ ಮೇಲೆ ಏಕೆ ಆರೋಪ ಮಾಡಲಾಗುತ್ತಿದೆ’ ಎಂದು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry