ಗುರುವಾರ , ಸೆಪ್ಟೆಂಬರ್ 19, 2019
29 °C

ಚೆಂಡು ಬಡಿದು ಯುವಕ ಸಾವು

Published:
Updated:

ಡಾಕಾ (ಎಎಫ್‌ಪಿ): ಕ್ರಿಕೆಟ್ ಆಡುತ್ತಿದ್ದ ವೇಳೆ ಎದೆಗೆ ಚೆಂಡು ಬಡಿದ ಕಾರಣ ಬಾಂಗ್ಲಾದೇಶದ 17 ವರ್ಷದ ಯುವಕ ಶನಿವಾರ ಮೃತಪಟ್ಟಿದ್ದಾನೆ.

‘ಶುಕ್ರವಾರ ಕ್ರಿಕೆಟ್ ಅಂಗಳದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ರಫೀಕ್‌ ಇಸ್ಲಾಮ್ ಅವರನ್ನುಇಲ್ಲಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಬಲ್ಲೂರ್ ಮಾತ್ ಅಂಗಳದಲ್ಲಿ ಕೆಲವು ಹುಡುಗರು ಸೇರಿಕೊಂಡು ಕ್ರಿಕೆಟ್ ಆಡುತ್ತಿದ್ದರು. ಮೃತಪಟ್ಟ ಯುವಕ ರಫೀಕ್ ಅಂಪೈರ್ ಆಗಿದ್ದ. ಪಂದ್ಯದ ವೇಳೆ ಚೆಂಡು ಬಂದು ಅವನ ಎದೆಗೆ ಬಡಿದಿದೆ. ಕುಸಿದು ಬಿದ್ದ ಯುವಕನನ್ನು ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ರಫೀಕ್ ಬಡ ಕುಟುಂಬದ ಹಿನ್ನಲೆಯ ಯುವಕ. ಆತನ ತಂದೆ ಆಟೊ ಚಾಲಕ. ತಾಯಿ ಮನೆ ಕೆಲಸ ಮಾಡುತ್ತಾರೆ’ ಎಂದು ಪೊಲೀಸರು ಹೇಳಿದ್ದಾರೆ.

Post Comments (+)