ಸ್ಟೀಲರ್ಸ್‌ಗೆ ರೋಚಕ ಜಯ

ಭಾನುವಾರ, ಮೇ 26, 2019
27 °C

ಸ್ಟೀಲರ್ಸ್‌ಗೆ ರೋಚಕ ಜಯ

Published:
Updated:
ಸ್ಟೀಲರ್ಸ್‌ಗೆ ರೋಚಕ ಜಯ

ಜೈಪುರ: ಹರಿಯಾಣ ಸ್ಟೀಲರ್ಸ್ ತಂಡದವರು ಶನಿವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ 32–30 ಪಾಯಿಂಟ್ಸ್‌ಗಳಿಂದ ತೆಲುಗು ಟೈಟನ್ಸ್ ವಿರುದ್ಧ ಜಯದಾಖಲಿಸಿದ್ದಾರೆ.

ಸ್ಟೀಲರ್ಸ್ ತಂಡದ ರೈಡರ್ ವಾಜಿರ್‌ಸಿಂಗ್ ಮಿಂಚು ಹರಿಸಿದರು. 14 ಪಾಯಿಂಟ್ಸ್‌ಗಳನ್ನು ಹೆಕ್ಕಿದ ಈ ಆಟಗಾರ ಜಯದ ರೂವಾರಿ ಎನಿಸಿದರು. ರಾಹುಲ್ ಚೌಧರಿ ನಾಯಕತ್ವದ ಟೈಟನ್ಸ್ ಕೊನೆಯ ಹಂತದವರೆಗೂ ಹೋರಾಟ ನಡೆಸಿತು.

29–29, 30–30ರಲ್ಲಿ ಸಮಬಲ ಹೊಂದಿದ್ದ ವೇಳೆ ಪಂದ್ಯ ಟೈ ಆಗುವ ಸಾಧ್ಯತೆ ಹೆಚ್ಚಿತ್ತು. ಆದರೆ ಕೊನೆಯ ಎರಡು ರೈಡಿಂಗ್‌ಗಳಲ್ಲಿ ಈ ತಂಡ ಎಡವಿತು. ರಾಹುಲ್ 11 ಪಾಯಿಂಟ್ಸ್ ತಂದರೆ, ನಿಲೇಶ್ ಸಲುಂಕೆ 10 ಪಾಯಿಂಟ್ಸ್‌ಗಳಿಂದ ಗಮನಸೆಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry