ಬನ್ನೇರುಘಟ್ಟ ಉದ್ಯಾನದಲ್ಲಿ ಹುಲಿ ದಾಳಿ: ಸಹಾಯಕ ಸಾವು

ಮಂಗಳವಾರ, ಜೂನ್ 25, 2019
23 °C

ಬನ್ನೇರುಘಟ್ಟ ಉದ್ಯಾನದಲ್ಲಿ ಹುಲಿ ದಾಳಿ: ಸಹಾಯಕ ಸಾವು

Published:
Updated:

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿಪಾಲಕನ ಸಹಾಯಕರೊಬ್ಬರು ಹುಲಿ ದಾಳಿಗೆ ಶನಿವಾರ ಸಂಜೆ ಮೃತಪಟ್ಟಿದ್ದಾರೆ. ಮೃತರನ್ನು ಆಂಜಿನಿ (40) ಎಂದು ಗುರುತಿಸಲಾಗಿದೆ. ಅವರು ಜೈವಿಕ ಉದ್ಯಾನದ ಹುಲಿಧಾಮದಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು.

ಸಂಜೆ ಅವರು ಹುಲಿಗಳಿಗೆ ಆಹಾರ ನೀಡಲು ತೆರಳಿದ್ದರು. ಆಗ ಬನ್ನೇರುಘಟ್ಟ ಸಫಾರಿಯ ಬಿಳಿ ಹುಲಿ ‘ಸೌಭಾಗ್ಯ’ಳ ಹನ್ನೊಂದು ತಿಂಗಳ ಎರಡು ಮರಿಗಳು ದಾಳಿ ನಡೆಸಿದವು. ಅವು ಪರಚಿದ್ದರಿಂದ ರಕ್ತಸ್ರಾವವಾಗಿ ಮೃತಪಟ್ಟರು.

ಮಾಂಸ ನೀಡುವಾಗ ಹುಲಿಗಳು ಪಂಜರಕ್ಕೆ ಹೋದ ನಂತರ ಆವರಣಕ್ಕೆ ತೆರಳಿ ಆಹಾರ ನೀಡಬೇಕು. ಈಚೆಗಷ್ಟೇ ಕೆಲಸಕ್ಕೆ ಸೇರಿದ್ದ ಆಂಜಿನಿಗೆ ಅನುಭವವಿಲ್ಲದ್ದರಿಂದ ಈ ಘಟನೆ ಸಂಭವಿಸಿದೆ.

ಆಹಾರ ತೆಗೆದುಕೊಂಡು ಹುಲಿ ಆವರಣದಲ್ಲಿ ತೆರಳಿದಾಗ ಹುಲಿಗಳು ಪಂಜರದಲ್ಲಿ ಇರುವುದಾಗಿ ಭಾವಿಸಿ ಒಳ ಹೋದಾಗ ಆವರಣದಲ್ಲೇ ಇದ್ದ ಮರಿ ಹುಲಿಗಳು ದಾಳಿ ನಡೆಸಿವೆ. ಗಾಬರಿಗೊಂಡ ಆಂಜಿನಿ ಹೊರಬರಲು ಗೊತ್ತಾಗದೇ ಆವರಣದ ಒಳಗೆ ನುಗ್ಗಿರುವುದಾಗಿ ಉದ್ಯಾನದ ಮೂಲಗಳು ತಿಳಿಸಿವೆ.

ಎರಡು ಮರಿ ಹುಲಿಗಳೂ ಪರಚಿ ತೀವ್ರವಾಗಿ ಗಾಯಗೊಳಿಸಿವೆ. ಬಳಿಕ ರಕ್ತಸ್ರಾವದಿಂದ ಆಂಜಿನಿ ಸಫಾರಿಯಿಂದ ಹೊರತರುತ್ತಿದ್ದಂತೆ ಮೃತಪಟ್ಟಿದ್ದಾಗಿ ಅವು ಹೇಳಿವೆ.

ಉದ್ಯಾನದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಅವರನ್ನು ಅಕ್ಟೋಬರ್‌ 1ರಂದು ಹುಲಿ ಸಫಾರಿಯ ಪ್ರಾಣಿ ಪಾಲಕನ ಸಹಾಯಕನಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು.

ಹುಲಿಗಳ ಚಲನವಲನ ಹಾಗೂ ನಡವಳಿಕೆ ಬಗ್ಗೆ ಅರಿವಿಲ್ಲದ ಅವರು ಮಾಂಸವನ್ನು ನೀಡಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ. ಹಕ್ಕಿಪಿಕ್ಕಿ ಕಾಲೊನಿಯಲ್ಲಿ ಅಲಗರಾಜ ಎಂದೇ ಪರಿಚಿತರಾದ ಅವರಿಗೆ ಪತ್ನಿ ಅಕ್ಕಮಾದಮ್ಮ, ಮಕ್ಕಳಾದ ದೇವರಾಜ ಮತ್ತು ಧರ್ಮರಾಜ ಇದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry