ಗುಡ್‌ಶಫರ್ಡ್‌ ವಸತಿ ಶಾಲೆ ಅವ್ಯವಸ್ಥೆ

ಗುರುವಾರ , ಜೂನ್ 20, 2019
26 °C

ಗುಡ್‌ಶಫರ್ಡ್‌ ವಸತಿ ಶಾಲೆ ಅವ್ಯವಸ್ಥೆ

Published:
Updated:
ಗುಡ್‌ಶಫರ್ಡ್‌ ವಸತಿ ಶಾಲೆ ಅವ್ಯವಸ್ಥೆ

ಚಿಕ್ಕಮಗಳೂರು: ಪೋಷಕರ ದೂರಿನ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಶನಿವಾರ ಲಕ್ಷ್ಮೀಶ ನಗರದ ಗುಡ್‌ಶಫರ್ಡ್‌ ಪ್ರಾಥಮಿಕ ವಸತಿ ಶಾಲೆಯ ವ್ಯವಸ್ಥೆಗಳನ್ನು ಪರಿಶೀಲಿಸಿದರು. ತರಗತಿ ಕೊಠಡಿ, ವಿದ್ಯಾರ್ಥಿಗಳ ಮಲಗುವ ಕೋಣೆ, ಅಡುಗೆಮನೆ ಅವ್ಯವಸ್ಥೆಗಳನ್ನು ಕಂಡು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಹಲವು ಬಾರಿ ನೋಟಿಸ್ ಜಾರಿಗೊಳಿಸಿದ್ದರೂ ಶಾಲೆಯ ಆಡಳಿತ ಮಂಡಳಿ ಅವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಸದಸ್ಯರು ದೂರಿದರು. ಶಾಲೆ ಮುಖ್ಯ ಶಿಕ್ಷಕಿ ಹಾಗೂ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಸಮಿತಿ ಅಧ್ಯಕ್ಷ ಜಿ.ಬಸವರಾಜ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಶಾಲೆಯಲ್ಲಿ ಅಡುಗೆ ಕೋಣೆ ಸರಿ ಇಲ್ಲ. ಮೂರು ದಿನಗಳಿಗೊಮ್ಮೆ ಮಕ್ಕಳಿಗೆ ಸ್ನಾನ ಮಾಡಿಸುತ್ತಾರೆ. ತರಗತಿ ಕೋಣೆಗಳಿಗೆ ಕಿಟಕಿಗಳಿಲ್ಲ. ದುರ್ನಾತ ಆವರಿಸಿದೆ’ ಎಂದರು.

‘ಬಾಲಕ, ಬಾಲಕಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇಲ್ಲ. ಮಲಗಲು ಮಕ್ಕಳಿಗೆ ಮಂಚದ ವ್ಯವಸ್ಥೆ ಇಲ್ಲ. ಶಾಲೆಯವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಶಾಲೆ ಮುಚ್ಚಿ ಮಕ್ಕಳನ್ನು ಬೇರೆ ಶಾಲೆಗೆ ವರ್ಗಾಯಿಸಲು ಜಿಲ್ಲಾಧಿಕಾರಿಗೆ ಶಿಫಾ ರಸು ಮಾಡಲಾಗುವುದು’ ಎಂದರು.

ಸಮಿತಿ ಸದಸ್ಯ ಜಿ.ಸುಬ್ರಮಣ್ಯ ಮಾತನಾಡಿ, ‘ಅನುಮತಿ ಪಡೆಯದೆ 1ರಿಂದ 7ನೇ ತರಗತಿವರೆಗೆ ವಸತಿ ಶಾಲೆ ನಡೆಸಲಾಗುತ್ತಿದೆ. ಶಾಲೆಯಲ್ಲಿ 23 ಬಾಲಕರು, 21 ಬಾಲಕಿಯರು ಇದ್ದಾರೆ. ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಸ್ನಾನದ ಕೋಣೆ, ಶೌಚಾಲಯ ಇಲ್ಲ. 44 ಮಕ್ಕಳಿಗೆ 4 ಶೌಚಾಲಯಗಳಿವೆ. ಮಕ್ಕಳಿಗೆ ಮಲಗಲು ಹರಿದ ಚಾಪೆಗಳನ್ನು ನೀಡಿದ್ದಾರೆ’ ಎಂದರು.

‘25 ವರ್ಷಗಳಿಂದ ಶಾಲೆ ನಡೆಸಲಾಗುತ್ತಿದೆ. ಆರು ಶಿಕ್ಷಕರಿದ್ದಾರೆ. ಕಾಫಿ ತೋಟಗಳ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ತಿಂಗಳಿಗೆ ₹ 300 ಶುಲ್ಕ ಪಡೆಯಲಾಗುತ್ತಿದೆ. ಏಪ್ರಿಲ್ ವರೆಗೆ ಕಾಲಾವಕಾಶ ನೀಡಿದರೆ ವಸತಿ ಶಾಲೆ ನಡೆಸಲು ಅನುಮತಿ ಪಡೆದುಕೊಳ್ಳಲಾಗುವುದು’ ಎಂದು ಮುಖ್ಯ ಶಿಕ್ಷಕಿ ವಲ್ಸುಸಾಮ್ಯುಯೆಲ್‌ ಮನವಿ ಮಾಡಿದರು. ಸಮಿತಿ ಸದಸ್ಯರಾದ ಕೆ.ಎನ್.ಚಂದ್ರಶೇಖರ್, ಬಿ.ಕೆ.ಸುರೇಶ್, ಅಧಿಕಾರಿಗಳಾದ ಉಷಾ, ದಿವ್ಯಾ, ರಂಗನಾಥ, ಲೋಕೇಶ್ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry