ನೆಹರೂ ಮೈದಾನ: ಅಭಿವೃದ್ಧಿಯ ತವಕ

ಗುರುವಾರ , ಜೂನ್ 20, 2019
30 °C

ನೆಹರೂ ಮೈದಾನ: ಅಭಿವೃದ್ಧಿಯ ತವಕ

Published:
Updated:
ನೆಹರೂ ಮೈದಾನ: ಅಭಿವೃದ್ಧಿಯ ತವಕ

ಸಿದ್ದಾಪುರ: ಪಟ್ಟಣದ ನೆಹರೂ ಮೈದಾನ ಕೇವಲ ಆಟದ ಅಂಗಳವಾಗಿ ಉಳಿದಿಲ್ಲ. ಹಲವು ಚಟುವಟಿಕೆಗಳಿಗೆ ವೇದಿಕೆಯಾಗಿರುವ ಈ ಮೈದಾನ, ಶೋಚನೀಯ ಸ್ಥಿತಿ ತಲುಪಿದೆ. ಈ ಮೈದಾನವನ್ನು ಸ್ವಾತಂತ್ರ್ಯ ಪೂರ್ವದಿಂದಲೂ ‘ಹುಡದಿ ಬಯಲು’ ಎಂದು ಕರೆಯಲಾಗುತ್ತಿತ್ತು. ‘ ಹುಡದಿ’ ಎಂಬುದು ಕಬಡ್ಡಿ ಆಟಕ್ಕೆ ಪರ್ಯಾಯ ಪದ. ಆದ್ದರಿಂದ ಹಿಂದಿನ ಕಾಲದಲ್ಲಿ ಈ ಸ್ಥಳ ಕಬಡ್ಡಿ ಆಡುವ ಬಯಲಾಗಿತ್ತು ಎಂಬುದನ್ನು ಈ ಹೆಸರೇ ಸೂಚಿಸುತ್ತದೆ.

1956ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಪಟ್ಟಣಕ್ಕೆ ಆಗಮಿಸಿದ್ದರು. ಆಗ ಅವರ ಕಾರ್ಯಕ್ರ ಮವನ್ನು ಇದೇ ಹುಡದಿ ಬಯಲಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು ಎಂಬ ಮಾಹಿತಿ ತಾಲ್ಲೂಕಿನ ಹಿರಿಯರಿಂದ ಲಭ್ಯವಾಗುತ್ತದೆ. ಆ ನಂತರ ‘ಹುಡದಿ ಬಯಲು’ ಬದಲಾಗಿ ನೆಹರೂ ಮೈದಾನ ಆಯಿತು ಎಂದು ಹೇಳಬಹುದು.

ತಾಲ್ಲೂಕಿನ ಹಲವು ಪ್ರಮುಖ ಘಟನಾವಳಿಗಳಿಗೆ ಸಾಕ್ಷಿಯಾಗಿರುವ ಈ ನೆಹರೂ ಮೈದಾನದ ಸುತ್ತ ಕನಿಷ್ಠ ಬೇಲಿಯನ್ನಾದರೂ ನಿರ್ಮಿಸುವವ ಕಾರ್ಯ ಇದುವರೆಗೆ ಆಗಿಲ್ಲ. ಈಗ ಕೆಲವು ವರ್ಷಗಳಿಂದ ಪಟ್ಟಣ ಪಂಚಾಯ್ತಿ ಮೈದಾನಕ್ಕೆ ಕಾಂಕ್ರಿಟ್ ಚರಂಡಿ ನಿರ್ಮಾಣ ಕಾಮಗಾರಿ ಮಾಡುತ್ತಿದೆ.

ಈ ಮೈದಾನದಲ್ಲಿ ಕ್ರಿಕೆಟ್ ಮತ್ತಿತರ ಆಟಗಳೊಂದಿಗೆ ನಾಟಕ, ಯಕ್ಷಗಾನ, ಸಭೆ, ಸಮಾರಂಭಗಳು ನಡೆಯುತ್ತವೆ. ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಅಂಗಡಿಗಳನ್ನು ಇಲ್ಲಿ ಹಾಕಲಾಗುತ್ತದೆ. ಅಲೆಮಾರಿಗಳ ಟೆಂಟ್‌ಗಳು ಆಗಾಗ ಇದೇ ಮೈದಾನದಲ್ಲಿ ಕಂಡುಬರು ತ್ತವೆ. ದನ–ಕರುಗಳು ಇಲ್ಲಿ ಮೇಯು ವುದಂತೂ ಮಾಮೂಲು ಸಂಗತಿ.

ಈ ಮೈದಾನದೊಳಗೆ ನೀರು ಹರಿಯುತ್ತದೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂತು. ಇದರೊಂದಿಗೆ ಈ ಮೈದಾನದೊಳಗೆ ನೀರು ಹರಿಯಲು ಕಾರಣವಾದ ಸಂಗತಿಯ ಬಗ್ಗೆ ಎರಡು ಪ್ರಮುಖ ರಾಜಕೀಯ ಪಕ್ಷಗಳ ಪ್ರಮುಖರಿಂದ ಹೇಳಿಕೆ ಮತ್ತು ಪ್ರತಿ ಹೇಳಿಕೆಗಳೂ ಬಂದವು. ಈ ಮೂಲಕ ನೆಹರೂ ಮೈದಾನ ಹಾಳಾಗುತ್ತಿರುವ ಸಂಗತಿ ಮತ್ತೊಮ್ಮೆ ಎಲ್ಲರ ಗಮನಕ್ಕೂ ಬಂದಂತಾಯಿತು.

‘ಈ ಮೈದಾನಕ್ಕೆ ಮಾಡಲಾಗಿರುವ ಚರಂಡಿ ಸರಿಯಾಗಿ ಇದೆ. ನಾವು ಕಳೆದ ಹಲವು ವರ್ಷಗಳ ಈ ಮೈದಾನದ ಸುಧಾರಣೆಗೆ ಯೋಜನೆ ಹಾಗೂ ಅಂದಾಜು ಪಟ್ಟಿಯನ್ನು (ಸರ್ಕಾರಕ್ಕೆ) ಕಳುಹಿಸುತ್ತ ಬಂದಿದ್ದೇವೆ’ ಎಂದು ಪಟ್ಟಣ ಪಂಚಾಯ್ತಿ ಎಂಜಿನಿಯರ್ ರಮೇಶ ನಾಯ್ಕ ಈ ಬಗ್ಗೆ ಕೇಳಿದಾಗ ಪ್ರತಿಕ್ರಿಯೆ ನೀಡಿದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry