ವೀರಶೈವ – ಲಿಂಗಾಯತ ಹೇಳಿಕೆ ನೀಡಿಲ್ಲ: ಸ್ವಾಮೀಜಿ ಸ್ಪಷ್ಟನೆ

ಶುಕ್ರವಾರ, ಮೇ 24, 2019
30 °C

ವೀರಶೈವ – ಲಿಂಗಾಯತ ಹೇಳಿಕೆ ನೀಡಿಲ್ಲ: ಸ್ವಾಮೀಜಿ ಸ್ಪಷ್ಟನೆ

Published:
Updated:

ಕೊಪ್ಪಳ: ಗಂಗಾವತಿಯಲ್ಲಿ ತಾವು ವೀರಶೈವ–ಲಿಂಗಾಯತ ವಿಷಯದ ಕುರಿತು ಯಾವುದೇ ಹೇಳಿಕೆ ನೀಡಿಲ್ಲ ಎಂದು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಧಾರವಾಡದ ಮುರುಘಾ ಮಠದ ವಸತಿ ನಿಲಯದ ಶತಮಾನೋತ್ಸವಕ್ಕೆ ಆಹ್ವಾನಿಸಲು ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸಕ್ಕೆ ಭೇಟಿ ನೀಡಿದ್ದೆ. ಶತಮಾನೋತ್ಸವ ಸಮಾ ರಂಭದ ಕುರಿತು ಚರ್ಚಿಸಿ ದ್ದೇವೆಯೇ ವಿನಃ ಬೇರೇನನ್ನೂ ಮಾತನಾಡಿಲ್ಲ.

ಈ ಕುರಿತ ವರದಿ ಸತ್ಯಕ್ಕೆ ದೂರವಾದದ್ದು ಎಂದು ಅವರು ಹೇಳಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ನಮ್ಮ ಬದ್ಧತೆ ಇದೆ. ಅದಕ್ಕಾಗಿ ಹೋರಾಡುವುದು ನಮ್ಮ ಜನ್ಮಸಿದ್ಧ ಹಕ್ಕು. ವೀರಶೈವ ಪದವನ್ನು ಬಳಸಬಾರದು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹಿಸಿ ಹೋರಾಟಕ್ಕೆ ಬಂದಿರುವ ರಾಜಕಾರಣಿಗಳೂ ಸ್ವಾರ್ಥದಿಂದ ಬಂದಿಲ್ಲ. ಇದು ಪ್ರತ್ಯೇಕ ಧರ್ಮ ಆಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry