‘ಅವ್ರು ಹೇಳೊದೊಂದು ಮಾಡೋದೊಂದು’

ಶುಕ್ರವಾರ, ಜೂನ್ 21, 2019
22 °C

‘ಅವ್ರು ಹೇಳೊದೊಂದು ಮಾಡೋದೊಂದು’

Published:
Updated:

ವಿಜಯಪುರ: ‘ಇಂದಿನ ಕಮ್ಯುನಿಸ್ಟರ ಹಾದಿ ಬೇರೆಯೇ ಆಗಿದೆ. ಅವರು ರಾಜಕೀಯಕರಣಗೊಂಡಿದ್ದಾರೆ. ಹೇಳುವುದೇ ಒಂದು ಮಾಡುವುದೇ ಮತ್ತೊಂದಾಗಿದೆ’ ಎಂದು ಕೇರಳದ ಸಾಮಾಜಿಕ ಕಾರ್ಯಕರ್ತ ಬನೀಶ ಕಣ್ಣೂರ ಹೇಳಿದರು. ನಗರದಲ್ಲಿ ಮಂಥನದ ಚಿಂತಕರ ಚಾವಡಿ ಈಚೆಗೆ ಆಯೋಜಿಸಿದ್ದ ‘ಕಣ್ಣೂರಿನ ಕಣ್ಣೀರ ಕಥೆ–ಕಮ್ಯುನಿಸ್ಟರು ನಡೆಸಿದ ಮಾರಣ ಹೋಮಗಳವಾಸ್ತವ ಕಥನ’ ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

‘ಯಾರು ಕಮ್ಯುನಿಸ್ಟ್‌ ಪಕ್ಷವನ್ನು ವಿರೋಧಿಸುತ್ತಾರೋ, ಅಂತಹ ಅಂದಾಜು 10 ಕೋಟಿ ಜನರನ್ನು ಪ್ರಪಂಚದಾದ್ಯಂತ ಇಲ್ಲಿಯವರೆಗೆ ಕೊಲ್ಲಲಾಗಿದೆ’ ಎಂದರು.

‘ಕಮ್ಯುನಿಸ್ಟರು ಕೊಲೆಗಡುಕತನ ಒಪ್ಪಿಕೊಂಡು ಬಾಳುತ್ತಿರುವುದು ದುರಂತ. ಅಂಥದರಲ್ಲಿ ಹಿಂದೂಗಳನ್ನು, ರಾಷ್ಟ್ರೀಯ ಸ್ವಯಂ ಸೇವಾ ಸಂಘವನ್ನು ಅವರು ಕ್ರೇಂದ್ರೀಕೃತಗೊಳಿಸಿಕೊಂಡಿರುವುದು ಇನ್ನೂ ದುರಂತ’ ಎಂದು ಅವರು ಹೇಳಿದರು.

‘ಕೇರಳದ ಕಣ್ಣೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂದಾಜು 72 ಕಾರ್ಯಕರ್ತರನ್ನು ಈವರೆಗೆ ಹತ್ಯೆ ಮಾಡಲಾಗಿದ್ದರೂ, ಸಂಘದ ಕಾರ್ಯಕರ್ತರು ಮಾತ್ರ ಎದೆಗುಂದದೆ, ದೇಶವೇ ಮೆಚ್ಚುವಂತಹ ಜನಪರ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ’ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

‘ಯಾರೋ ಬಂದು ಯಾವುದೇ ವ್ಯಕ್ತಿಯನ್ನು ಕೊಲ್ಲಬಹುದೇ ವಿನಾಃ ಅವರ ವಿಚಾರಧಾರೆಗಳನ್ನಲ್ಲ. ಕೇರಳದಲ್ಲಿ, ಕಣ್ಣೂರಿನಲ್ಲಿ ಭಯದ ವಾತಾವರಣವಿದ್ದರೂ ಸಂಘದ ಕಾರ್ಯಕರ್ತರು ಎದೆಗುಂದದೆ ತಮ್ಮ ತಮ್ಮ ಕೌಟುಂಬಿಕ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಒಬ್ಬೊಬ್ಬರ ಮೇಲೂ ಸಾಕಷ್ಟು ಸುಳ್ಳು ಕೇಸುಗಳಿದ್ದರೂ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶ್ರೇಷ್ಠವಾದ ಕೆಲಸ ಮುಂದುವರೆಸಿಕೊಂಡು ಹೋಗುತ್ತಿರುವುದು ಅವರ ಆತ್ಮ ವಿಶ್ವಾಸವನ್ನು ತೋರಿಸುತ್ತದೆ’ ಎಂದರು.

‘ಒಂದೇ ದೇಶ, ಅಭಿವೃದ್ಧಿ ದೇಶ ಭಾರತ’ ಎಂಬ ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಸಂಘದ ಕಾರ್ಯಕ್ರಮಗಳು ಯಾವಾಗಲೂ ವಿಶೇಷವಾಗಿರುತ್ತವೆ. ರಾಷ್ಟ್ರಪ್ರೇಮ, ದೇಶೀಯತೆ, ಸ್ವದೇಶಿ ಪರಿಕಲ್ಪನೆ ಮುಂತಾದ ಸಂಸ್ಕಾರ, ಸಂಸ್ಕೃತಿಗಳನ್ನು ಅನಾವರಣ ಮಾಡುವ, ವಿಶ್ವ ಭ್ರಾತೃತ್ವ, ಸಹೋದರತೆಯನ್ನು ಸಾರುವುದು, ಹಿಂದುತ್ವಕ್ಕೆ ಬದ್ಧತೆ ತೋರುವುದನ್ನು ಸಂಘದ ಶ್ರೇಷ್ಠತೆ ಹೇಳುತ್ತದೆ.

ಕೇರಳದಲ್ಲಿ ಕ್ರಿಶ್ಚಿಯನ್ನರು, ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದು, ರಾಜಕೀಯ ಏರಿಳಿತಗಳನ್ನು ನಿರ್ವಹಿಸುವಷ್ಟು ವೋಟ್ ಬ್ಯಾಂಕ್ ಹೊಂದಿದ್ದಾರೆ. ಅಲ್ಲಿನ ಬಹುತೇಕ ಶಿಕ್ಷಣ ಸಂಸ್ಥೆಗಳು, ಶಾಲಾ–ಕಾಲೇಜುಗಳು ಅವರ ಒಡೆತನದಲ್ಲಿವೆ’ ಎಂದು ತಿಳಿಸಿದರು.

‘ಕೇರಳದ ಕಣ್ಣೂರಿನಲ್ಲಿ ಸಂಘದ ಅಮಾಯಕ ಕಾರ್ಯಕರ್ತರು ತಮ್ಮದಲ್ಲದ ತಪ್ಪಿಗೂ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಸರ್ಕಾರ ಅವರನ್ನು ಹಣಿಯುವ ಕಾರ್ಯ ಮಾಡಿದಷ್ಟು ಸಂಘದ ಕಾರ್ಯಕರ್ತರು ಹೆಚ್ಚೆಚ್ಚು ತಮ್ಮ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಮಾಜಪರ ಕಾರ್ಯ ನಿರ್ವಹಿಸಿ ದೇಶದ ಗಮನ ಸೆಳೆಯುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜಿಲ್ಲಾ ಸಂಘ ಚಾಲಕ ಡಾ.ಸತೀಶ ಜಿಗಜಿನ್ನಿ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry