ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧವೆಯರನ್ನು ಮದುವೆಯಾಗುವ ಪುರುಷರಿಗೆ ₹ 2 ಲಕ್ಷ ಬಹುಮಾನ

Last Updated 8 ಅಕ್ಟೋಬರ್ 2017, 10:19 IST
ಅಕ್ಷರ ಗಾತ್ರ

ಭೋಪಾಲ್‌: ವಿಧವೆಯರನ್ನು ವಿವಾಹವಾಗುವ ಪುರುಷರಿಗೆ ಮಧ್ಯಪ್ರದೇಶ ಸರ್ಕಾರ ₹ 2 ಲಕ್ಷ ನೀಡುವುದಾಗಿ ಘೋಷಣೆ ಮಾಡಿದೆ.

ಮಧ್ಯಪ್ರದೇಶದ ಸಾಮಾಜಿಕ ನ್ಯಾಯ ಸಚಿವಾಲಯ ಈ ಘೋಷಣೆ ಮಾಡಿದ್ದು ಇದಕ್ಕಾಗಿ ಮಧ್ಯಪ್ರದೇಶ ಸರ್ಕಾರ 20 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದೆ. ಕಳೆದ ಜುಲೈ ತಿಂಗಳಲ್ಲಿ ಸುಪ್ರೀಂ ಕೋರ್ಟ್ ವಿಧವೆಯರ ಮರು ಮದುವೆಗೆ ಉತ್ತೇಜನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದರಿಂದ ಪ್ರೇರಣೆಗೊಂಡ ಮಧ್ಯಪ್ರದೇಶ ಸರ್ಕಾರ ವಿಧವೆಯರ ಮರು ವಿವಾಹ ಯೋಜನೆಯನ್ನು ಜಾರಿಗೆ ತರುತ್ತಿದೆ.

18 ರಿಂದ 45 ವರ್ಷದೊಳಗಿನ ಪುರುಷರು ವಿಧವೆಯರನ್ನು ಮದುವೆಯಾಗಲು ಅರ್ಹರಾಗಿರುತ್ತಾರೆ. ಈ ಮದುವೆ ಪುರುಷರಿಗೆ ಮೊದಲ ಮದುವೆಯಾಗಿರಬೇಕು ಎಂದು ಸರ್ಕಾರ ಷರತ್ತು ವಿಧಿಸಿದೆ. ಉಪನೋಂದಾಣಿಧಿಕಾರಿಗಳ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾಗುವವರು ₹ 2 ಲಕ್ಷ ರೂಪಾಯಿ ಹಣ ಪಡೆಯಬಹುದು.

ಮೊದಲ ವರ್ಷ ಸಾವಿರ ವಿಧವೆಯರಿಗೆ ಮರು ಮದುವೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT