ಮಂಗಳವಾರ, ಸೆಪ್ಟೆಂಬರ್ 17, 2019
21 °C

ಛತ್ರಿಯ ಆಸರೆ ಪಡೆಯದೆ ಗಾರ್ಡ್‌ಗಳ ಗೌರವ ಸ್ವೀಕರಿಸಿದ ರಾಮನಾಥ ಕೋವಿಂದ್

Published:
Updated:
ಛತ್ರಿಯ ಆಸರೆ ಪಡೆಯದೆ ಗಾರ್ಡ್‌ಗಳ ಗೌರವ ಸ್ವೀಕರಿಸಿದ ರಾಮನಾಥ ಕೋವಿಂದ್

ತಿರುವನಂತಪುರ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಮಳೆ ಬರುತ್ತಿದ್ದರೂ ಗಾರ್ಡ್ ನೀಡಿದ ಛತ್ರಿ ನಿರಾಕರಿಸಿ ಮಳೆಯಲ್ಲೇ ಗಾರ್ಡ್‌ಗಳ ಗೌರವ ಸ್ವೀಕರಿಸಿದ್ದಾರೆ.

ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದ ನಂತರ ಮೊದಲ ಬಾರಿ ಕೇರಳಕ್ಕೆ ಭೇಟಿ ನೀಡಿದ ಸಂದರ್ಭ ಇದಾಗಿತ್ತು.

ರಾಮನಾಥ್ ಕೋವಿಂದ್ ಅವರು ಆಧ್ಯಾತ್ಮಿಕ ಗುರು ಮಾತಾ ಅಮೃತಾನಂದಮಯಿ ಅವರ 64ನೇ ಹುಟ್ಟುಹಬ್ಬದ ಪ್ರಯುಕ್ತ ಕೊಲ್ಲಂನಲ್ಲಿರುವ  ಕಾರ್ಯಕ್ರಮಗಳಿಗೆ ತೆರಳಬೇಕಾಗಿತ್ತು.  ಹಾಗಾಗಿ ತಿರುವನಂತಪುರದ ವಿಮಾನ ನಿಲ್ದಾಣಕ್ಕೆ ಬಂದಾಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ರಾಜ್ಯಪಾಲ ಪಿ ಸತಾಶಿವಂ ಅವರು ಸ್ವಾಗತ ಕೋರಲು ನಿಲ್ದಾಣಕ್ಕೆ ಬಂದಿಳಿದಿದ್ದರು.

ಈ ವೇಳೆ ಕೇರಳದಲ್ಲಿ ಮಳೆ ಬರುತ್ತಿತ್ತು. ಆಗ ಕೋವಿಂದ್ ಅವರಿಗೆ ಮಳೆಯಿಂದ ರಕ್ಷಣೆ ನೀಡಲು ಗಾರ್ಡ್‌ಗಳು ಮುಂದಾಗಿದ್ದಾರೆ. ಆಗ ಕೋವಿಂದ್ ಅವರು ಛತ್ರಿಯ ಆಸರೆ ಪಡೆಯದೆ ಗಾರ್ಡ್‌ಗಳು ನೀಡಿದ ಗೌರವ ಸ್ವೀಕರಿಸಿದ್ದಾರೆ.

Post Comments (+)