ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತುದಾರರಿಗೆ ಶೀಘ್ರವೇ ತೆರಿಗೆ ಮರುಪಾವತಿ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ರಫ್ತುದಾರರಿಗೆ ಬಾಕಿ ಇರುವ ತೆರಿಗೆ ಮೊತ್ತ ನವೆಂಬರ್ ಅಂತ್ಯದೊಳಗೆ ಮರುಪಾವತಿ ಆಗಲಿದೆ’ ಎಂದು ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್ ಅಧಿಯಾ ತಿಳಿಸಿದ್ದಾರೆ.

‘ಜುಲೈ–ಆಗಸ್ಟ್‌ ಅವಧಿಯಲ್ಲಿ ಸಮಗ್ರ ಜಿಎಸ್‌ಟಿ  ರೂಪದಲ್ಲಿ ₹67ಸಾವಿರ ಕೋಟಿ ಸಂಗ್ರಹವಾಗಿದೆ. ಅದರಲ್ಲಿ ₹5 ಸಾವಿರ ಕೋಟಿಗಳಿಂದ ₹10 ಸಾವಿರ ಕೋಟಿಗಳಷ್ಟು ಮಾತ್ರವೇ ರಫ್ತುದಾರರಿಗೆ ಮರುಪಾವತಿ ಆಗಬೇಕಿದೆ’ ಎಂದು ಮಾಹಿತಿ ನೀಡಿದ್ದಾರೆ.

ಜಿಎಸ್‌ಟಿ ರೂಪದಲ್ಲಿ ಸಂಗ್ರಹವಾಗಿರುವ ತೆರಿಗೆಯಲ್ಲಿ ₹ 65 ಸಾವಿರ ಕೋಟಿಗಳನ್ನು ಮರಳಿಸುವಂತೆ ರಫ್ತು ದಾರರು ಒತ್ತಾಯಿಸಿದ್ದರು. ಮರುಪಾವತಿ ವಿಳಂಬವಾದರೆ, ಹಣಕಾಸು ಬಿಕ್ಕಟ್ಟು ಎದುರಾಗಿ ವಹಿವಾಟಿಗೆ ಅಡ್ಡಿಯಾಗುತ್ತದೆ ಎಂದು ಹೇಳಿದ್ದರು.

ಮರುಪಾವತಿ ವ್ಯವಸ್ಥೆಯಲ್ಲಿ ತುಸು ವಿಳಂಬ ಆಗಿದೆ. ಹಾಗಾಗಿ ಜುಲೈ ತಿಂಗಳ ₹600 ಕೋಟಿ ಅಕ್ಟೋಬರ್ 10 ರಿಂದ ಹಾಗೂ ಆಗಸ್ಟ್‌ ತಿಂಗಳ ₹800 ಕೋಟಿ ಮೊತ್ತ ಅಕ್ಟೋಬರ್ 18 ರಿಂದ ಮರುಪಾವತಿ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಜಿಎಸ್‌ಟಿಯಲ್ಲಿ ರಫ್ತುದಾರರು ಸರಕುಗಳಿಗೆ ಮುಂಗಡವಾಗಿ ತೆರಿಗೆ (ಐಜಿಎಸ್‌ಟಿ) ಪಾವತಿಸಬೇಕು. ಸರಕು ಗಳನ್ನು ರಫ್ತು ಮಾಡಿದ ಬಳಿಕ ಮರು
ಪಾವತಿಗೆ ಅರ್ಜಿ ಸಲ್ಲಿಸಬೇಕು. ಜಿಎಸ್‌ಟಿಆರ್‌–1 ಸಲ್ಲಿಸುವಾಗ ‘ಟೇಬಲ್‌ 6ಎ’ ನಲ್ಲಿ ಮರುಪಾವತಿ ವಿವರ ನೀಡಬೇಕು.

‘ಮುಂದಿನ 6 ತಿಂಗಳವರೆಗೆ ತೆರಿಗೆ ಇಲ್ಲದೇ ಸರಕುಗಳನ್ನು ರಫ್ತು ಮಾಡಲು ಜಿಎಸ್‌ಟಿ ಮಂಡಳಿ ಅನುಮತಿ ನೀಡಿದೆ’ ಎಂದೂ ಹೇಳಿ
ದ್ದಾರೆ. ಹಸ್ಮುಖ್‌ ಆಧಿಯಾ ನೇತೃತ್ವದ ಸಮಿತಿಯು ರಫ್ತುದಾರರ ಎದುರಿಸುತ್ತಿರುವ ಸಮಸ್ಯೆಗಳನ್ನು ಜಿಎಸ್‌ಟಿ ಮಂಡಳಿಗೆ ಮನವರಿಕೆ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT