ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಿಪುರದಲ್ಲಿ ಮತ್ತೆ ತುಂಬಿಕೊಂಡ ಹಸಿರು

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಮೂಲ ಕಳೆ ಮರುಕಳಿಸಿದೆ. ಹಚ್ಚಹಸಿರು ಮೈದುಂಬಿಕೊಂಡು ಗಿಡಮರಗಳು ನಳನಳಿಸುತ್ತಿವೆ.

ಜಿಂಕೆ, ಆನೆ, ಹುಲಿ ಚಿರತೆ, ಕರಡಿ, ಕಡವೆ ಮುಂತಾದ ಪ್ರಾಣಿಗಳು ರಸ್ತೆಯಲ್ಲಿಯೇ ದರ್ಶನ ನೀಡುತ್ತಿದ್ದು ಪ್ರವಾಸಿಗರನ್ನು ಸೆಳೆಯುತ್ತಿವೆ. ನೀರು, ಆಹಾರ ಅರಸಿ ವಲಸೆ ಹೋಗಿದ್ದ ಪ್ರಾಣಿಗಳು ಮತ್ತೆ ತವರಿಗೆ ಮರಳಿವೆ.

ಮಳೆಯಿಲ್ಲದೆ ಒಣಗಿದ್ದ ಕಾಡು, ಕಳೆದ ಬೇಸಿಗೆಯಲ್ಲಿ ಕಾಳ್ಗಿಚ್ಚಿನಿಂದ ಸಾವಿರಾರು ಎಕರೆ ಅರಣ್ಯ ನಾಶವಾಗಿತ್ತು. ಬೆಂಕಿ ಭೀತಿಯಿಂದ ಪ್ರಾಣಿಗಳು ತಮಿಳುನಾಡಿನ ಮದುಮಲೈ ಮತ್ತು ಕೇರಳದ ಅರಣ್ಯದ ನೀರಿರುವ ಪ್ರದೇಶಗಳಿಗೆ ವಲಸೆ ಹೋಗಿದ್ದವು.

ಹೀಗಾಗಿ, ಬಂಡೀಪುರ ಅರಣ್ಯದಲ್ಲಿ ಇತ್ತೀಚೆಗೆ ಜಿಂಕೆ, ಕಡವೆ ಮತ್ತು ಇತರೆ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿತ್ತು. ಪ್ರಾಣಿಗಳು ನೀರು ಅರಸಿ ಗ್ರಾಮಗಳಿಗೆ ದಾಳಿ ಮಾಡುವುದು ಸಾಮಾನ್ಯವಾಗಿತ್ತು.

ಈಗ ಅರಣ್ಯದಂಚಿನ ಮತ್ತು ಒಳಭಾಗದಲ್ಲಿರುವ ಕೆರೆಗಳು ತುಂಬಿವೆ. ಹಸಿರು ಮತ್ತೆ ಚಿಗುರಿದೆ. ವನ್ಯಜೀವಿಗಳಿಗೆ ಆಹಾರ, ನೀರು ಸುಲಭವಾಗಿ ಲಭ್ಯವಾಗುತ್ತಿವೆ.

ಬಂಡೀಪುರ ಅರಣ್ಯ ಪ್ರದೇಶ ತಮಿಳುನಾಡು ಮತ್ತು ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವುದರಿಂದ ಇಲ್ಲಿನ ಸಂಪರ್ಕ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಊಟಿ ಮತ್ತು ಕಲ್ಲಿಕೋಟೆಗೆ ತೆರಳುವ ಪ್ರಯಾಣಿಕರಿಗೆ ನಿತ್ಯ ಪ್ರಾಣಿಗಳ ದರ್ಶನವಾಗುತ್ತಿದೆ.

ದಸರಾ ವೇಳೆ ಆದಾಯ: ಸತತ ನಾಲ್ಕು ದಿನಗಳು ರಜೆ ಇದ್ದ ಕಾರಣ ಪ್ರವಾಸಿಗರು ದಾಂಗುಡಿ ಇಟ್ಟಿದ್ದರು. ಈ ಅವಧಿಯಲ್ಲಿ ₹ 13.50 ಲಕ್ಷಕ್ಕೂ ಹೆಚ್ಚಿನ ಆದಾಯ ಬಂದಿದೆ.

–ಮಲ್ಲೇಶ ಮೇಲುಕಾಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT