ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌–1: ಹ್ಯಾಮಿಲ್ಟನ್‌ಗೆ ಪ್ರಶಸ್ತಿ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸುಜುಕಾ: ಫಾರ್ಮುಲಾ–1 ಚಾಂಪಿಯನ್‌ಷಿಪ್‌ನಲ್ಲಿ ಮರ್ಸಿಡೀಸ್‌ ತಂಡದ ಲೂಯಿಸ್‌ ಹ್ಯಾಮಿಲ್ಟನ್‌ ಪ್ರಾಬಲ್ಯ ಮುಂದುವರಿದಿದೆ.

ಭಾನುವಾರ ನಡೆದ ಜಪಾನ್‌ ಗ್ರ್ಯಾನ್‌ ಪ್ರಿ ರೇಸ್‌ನಲ್ಲಿ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಹ್ಯಾಮಿ ಲ್ಟನ್‌, ಈ ಋತುವಿನಲ್ಲಿ ಗೆದ್ದ ಒಟ್ಟಾರೆ ಎಂಟನೇ ಪ್ರಶಸ್ತಿ ಇದಾಗಿದೆ. ಈ ಮೂಲಕ ನಾಲ್ಕನೇ ಬಾರಿ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸುವ ಹಾದಿಯನ್ನು ಇನ್ನಷ್ಟು ಸುಲಭ ಮಾಡಿಕೊಂಡಿದ್ದಾರೆ. ಅವರು ವೃತ್ತಿಬದುಕಿನಲ್ಲಿ ಜಯಿಸಿದ ಒಟ್ಟಾರೆ 61ನೇ ಟ್ರೋಫಿ ಇದು.

ರೇಸ್‌ನ ಆರಂಭದಿಂದಲೇ ಅಮೋಘ ಚಾಲನಾ ಕೌಶಲ ಮೆರೆದ ಹ್ಯಾಮಿಲ್ಟನ್‌ ಎಲ್ಲಾ ಲ್ಯಾಪ್‌ಗಳಲ್ಲೂ ಪಾರಮ್ಯ ಮೆರೆದು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದರು. ರೆಡ್‌ ಬುಲ್‌ ತಂಡದ ಮ್ಯಾಕ್ಸ್‌ ವೆರ್ಸ್ಟಾಪನ್‌ ಮತ್ತು ಡೇನಿಯನ್‌ ರಿಕಿಯಾರ್ಡೊ, ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ಸಹರಾ ಫೋರ್ಸ್‌ ಇಂಡಿಯಾ ತಂಡ ‘ಡಬಲ್‌ ಪಾಯಿಂಟ್‌’ ಕಲೆಹಾಕಿತು. ಈ ತಂಡದ ಎಸ್ಟೆಬನ್‌ ಒಕಾನ್‌ ಮತ್ತು ಸರ್ಜಿಯೊ ಪೆರೆಜ್‌ ಕ್ರಮವಾಗಿ ಆರು ಮತ್ತು ಏಳನೇ ಸ್ಥಾನಗಳೊಂದಿಗೆ ಸ್ಪರ್ಧೆ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT