ಸೌರಾಷ್ಟ್ರ, ಕೇರಳಕ್ಕೆ ಭರ್ಜರಿ ಗೆಲುವು

ಮಂಗಳವಾರ, ಜೂನ್ 18, 2019
24 °C
ರೈಲ್ವೇಸ್‌ಗೆ ಜಯ; ಉನದ್ಕತ್‌ಗೆ ಆರು ವಿಕೆಟ್‌

ಸೌರಾಷ್ಟ್ರ, ಕೇರಳಕ್ಕೆ ಭರ್ಜರಿ ಗೆಲುವು

Published:
Updated:
ಸೌರಾಷ್ಟ್ರ, ಕೇರಳಕ್ಕೆ ಭರ್ಜರಿ ಗೆಲುವು

ರೋಹ್ಟಕ್‌: ಹರಿಯಾಣ ಬ್ಯಾಟ್ಸ್‌ಮನ್‌ಗಳನ್ನು ಬೆಂಬಿಡದೆ ಕಾಡಿದ ಸೌರಾಷ್ಟ್ರದ ವೇಗಿಗಳು ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ತಂಡ ಅಮೋಘ ಜಯ ಸಾಧಿಸಲು ನೆರವಾದರು. ಎದುರಾಳಿಗಳನ್ನು ಎರಡೂ ಇನಿಂಗ್ಸ್‌ಗಳಲ್ಲಿ ಕಟ್ಟಿ ಹಾಕಿದ ಎಡಗೈ ವೇಗಿ ಜಯದೇವ ಉನದ್ಕತ್‌ ಮತ್ತು ಮಧ್ಯಮ ವೇಗಿ ಶೌರ್ಯ ಸನದಿಯ ಮೂರೇ ದಿನಗಳಲ್ಲಿ ಸೌರಾಷ್ಟ್ರಕ್ಕೆ ಗೆಲುವಿನ ಕೊಡುಗೆ ನೀಡಿದರು.

ಇಲ್ಲಿನ ಬನ್ಸಿಲಾಲ್ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಸೌರಾಷ್ಟ್ರದ ಮೊದಲ ಇನಿಂಗ್ಸ್ ಮೊತ್ತವಾದ 278 ರನ್‌ಗಳಿಗೆ ಉತ್ತರಿಸಿದ ಹರಿಯಾಣ 107 ರನ್‌ಗಳಿಗೆ ಪತನ ಕಂಡಿತ್ತು. ಫಾಲೊ ಆನ್‌ ಆದ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲೂ ಚೇತರಿಸಿಕೊಳ್ಳಲು ಆಗಲಿಲ್ಲ. 140 ರನ್‌ಗಳಿಗೆ ಆಲೌಟಾದ ತಂಡ ಇನಿಂಗ್ಸ್ ಮತ್ತು 31 ರನ್‌ಗಳ ಸೋಲೊಪ್ಪಿಕೊಂಡಿತು.

ಎರಡೂ ಇನಿಂಗ್ಸ್‌ಗಳಲ್ಲಿ ತಲಾ ಮೂರು ವಿಕೆಟ್ ಕಬಳಿಸಿ ಜಯದೇವ್ ಮಿಂಚಿದರೆ ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಗಳಿಸಿದ ಶೌರ್ಯ ಎರಡನೇ ಇನಿಂಗ್ಸ್‌ನಲ್ಲಿ ಎರಡು ವಿಕೆಟ್ ಪಡೆದರು. ಮಧ್ಯಮ ವೇಗಿ ಕುಶಾಂಗ್ ಪಟೇಲ್‌ ಒಟ್ಟು ನಾಲ್ಕು ವಿಕೆಟ್‌ ಉರುಳಿಸಿ ಮಿಂಚಿದರು.

ಕೇರಳಕ್ಕೆ ಜಾರ್ಖಂಡ್ ಎದುರು ಗೆಲುವು: ಎರಡನೇ ಇನಿಂಗ್ಸ್‌ನಲ್ಲಿ ಜಾರ್ಖಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಕೆಡವಿದ ಕೇರಳ ತಂಡದವರು ಜಯದೊಂದಿಗೆ ಮೂರನೇ ದಿನ ಸಂಭ್ರಮಿಸಿದರು. ತಿರುವನಂತಪುರದ ಗ್ರೀನ್‌ಫೀಲ್ಡ್‌ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಕೇರಳ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿತು.

57 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದ ಕೇರಳ ಎರಡನೇ ಇನಿಂಗ್ಸ್‌ನಲ್ಲಿ ಎದುರಾಳಿಗಳನ್ನು ಕೇವಲ 89 ರನ್‌ಗಳಿಗೆ ಆಲೌಟ್ ಮಾಡಿತು. ಗೆಲುವಿಗೆ ಬೇಕಾದ 33 ರನ್‌ಗಳನ್ನು ಐದು ಓವರ್‌ಗಳಲ್ಲಿ ಗಳಿಸಿತು. ಆಫ್‌ ಬ್ರೇಕ್ ಬೌಲರ್ ಜಲಜ್‌ ಸಕ್ಸೇನಾ ಮತ್ತು ಎಡಗೈ ಸ್ಪಿನ್ನರ್ ಕಾರಪರಂಬಿಲ್‌ ಮೋನಿಶ್‌ ಜಾರ್ಖಂಡ್‌ನ ಎರಡನೇ ಇನಿಂಗ್ಸ್‌ ಪತನಕ್ಕೆ ಕಾರಣರಾದರು.

ರೈಲ್ವೇಸ್‌ ಜಯಭೇರಿ: ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ರೈಲ್ವೇಸ್ ತಂಡ ಆತಿಥೇಯ ಉತ್ತರ ಪ್ರದೇಶ ತಂಡವನ್ನು 21 ರನ್‌ಗಳಿಂದ ಮಣಿಸಿತು. ಅನುರೀತ್ ಸಿಂಗ್ ಮತ್ತು ಅವಿನಾಶ್ ಯಾದವ್ ಅವರ ಉತ್ತಮ ಬೌಲಿಂಗ್ ಹಾಗೂ ಅರಿಂದಮ್ ಘೋಷ್ ಅವರ ಅರ್ಧಶತಕ ರೈಲ್ವೇಸ್ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು.

ಸಂಕ್ಷಿಪ್ತ ಸ್ಕೋರ್‌: ಎ ಗುಂಪು: ರೈಲ್ವೇಸ್‌: 76 ಓವರ್‌ಗಳಲ್ಲಿ 182; ಉತ್ತರ ಪ್ರದೇಶ: 85.5 ಓವರ್‌ಗಳಲ್ಲಿ 250; ರೈಲ್ವೇಸ್ (ಎರಡನೇ ಇನಿಂಗ್ಸ್‌): 63.3 ಓವರ್‌ಗಳಲ್ಲಿ 161 (ಅರಿಂದಮ್ ಘೋಷ್‌ 57; ಅಂಕಿತ್ ರಜಪೂತ್‌ 34ಕ್ಕೆ4, ಜೀಶನ್ ಅನ್ಸಾರಿ 47ಕ್ಕೆ3); ಉತ್ತರ ಪ್ರದೇಶ (ಎರಡನೇ ಇನಿಂಗ್ಸ್‌): 26 ಓವರ್‌ಗಳಲ್ಲಿ 72ಕ್ಕೆ ಆಲೌಟ್‌ (ಅವಿನಾಶ್ ಯಾದವ್‌ 26ಕ್ಕೆ4, ಅನುರೀತ್ ಸಿಂಗ್‌ 25ಕ್ಕೆ3, ದೀಪಕ್ ಬನ್ಸಾಲ್‌ 11ಕ್ಕೆ2). ಫಲಿತಾಂಶ: ರೈಲ್ವೇಸ್‌ಗೆ 21 ರನ್‌ಗಳ ಜಯ. ದೆಹಲಿ: 435; ಅಸ್ಸಾಂ: 258 ಮತ್ತು 31 ಓವರ್‌ಗಳಲ್ಲಿ 3ಕ್ಕೆ60 (ನವದೀಪ್ ಸಾಯ್ನಿ13ಕ್ಕೆ2).

ಬಿ ಗುಂಪು: ಸೌರಾಷ್ಟ್ರ: 90.3 ಓವರ್‌ಗಳಲ್ಲಿ 278; ಹರಿಯಾಣ: 42.3 ಓವರ್‌ಗಳಲ್ಲಿ 107 ಮತ್ತು 43 ಓವರ್‌ಗಳಲ್ಲಿ 140 (ಚೈತನ್ಯ ಬಿಷ್ನೋಯ್‌ 56, ದೀಪಕ್ ಪೂನಿಯಾ 34; ಜಯದೇವ ಉನದ್ಕತ್‌ 55ಕ್ಕೆ3, ಶೌರ್ಯ ಸನದಿಯ 18ಕ್ಕೆ2,  ಚಿರಾಗ್ ಜಾನಿ 12ಕ್ಕೆ2). ಫಲಿತಾಂಶ: ಸೌರಾಷ್ಟ್ರಕ್ಕೆ ಇನಿಂಗ್ಸ್‌ ಮತ್ತು 31 ರನ್‌ಗಳ ಜಯ; ಜಾರ್ಖಂಡ್‌: 73.2 ಓವರ್‌ಗಳಲ್ಲಿ 202; ಕೇರಳ: 90.3 ಓವರ್‌ಗಳಲ್ಲಿ 259; ಜಾರ್ಖಂಡ್‌(ಎರಡನೇ ಇನಿಂಗ್ಸ್‌): 41.3 ಓವರ್‌ಗಳಲ್ಲಿ 89ಕ್ಕೆ ಆಲೌಟ್‌ (ಜಲಜ್ ಸಕ್ಸೇನ 27ಕ್ಕೆ5, ಕಾರಪರಂಬಿಲ್ ಮೋನಿಶ್‌ 42ಕ್ಕೆ4). ಕೇರಳ (ಎರಡನೇ ಇನಿಂಗ್ಸ್‌): 5 ಓವರ್‌ಗಳಲ್ಲಿ 1ಕ್ಕೆ34. ಫಲಿತಾಂಶ: ಕೇರಳಕ್ಕೆ ಒಂದು ವಿಕೆಟ್ ಜಯ; ರಾಜಸ್ತಾನ: 330; ಜಮ್ಮು ಮತ್ತು ಕಾಶ್ಮೀರ: 152 ಓವರ್‌ಗಳಲ್ಲಿ 6ಕ್ಕೆ 432 (ಪ್ರಣವ್ ಗುಪ್ತ 51, ಲನ್ ದೇವ್ ಸಿಂಗ್‌ 79, ಪರ್ವೇಜ್ ರಸೂಲ್‌ 97).

ಸಿ ಗುಂಪು: ತ್ರಿಪುರ (ಮೊದಲ ಇನಿಂಗ್ಸ್‌): 2 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 6. ಒಡಿಶಾ ಎದುರಿನ ಪಂದ್ಯ. ಬರೋಡ: 302; ಮಧ್ಯಪ್ರದೇಶ: 551; ಬರೋಡ (ಎರಡನೇ ಇನಿಂಗ್ಸ್‌): 17 ಓವರ್‌ಗಳಲ್ಲಿ 1ಕ್ಕೆ 41 (ಆದಿತ್ಯ ವಾಘಮೋಡೆ 31). ಆಂಧ್ರಪ್ರದೇಶ: 309; ತಮಿಳುನಾಡು 176 ಮತ್ತು 54 ಓವರ್‌ಗಳಲ್ಲಿ 2ಕ್ಕೆ 112 (ಅಭಿನವ್‌ ಮುಕುಂದ್‌ 54).

ಡಿ ಗುಂಪು: ಸರ್ವಿಸಸ್‌: 359; ಬೆಂಗಾಲ್‌: 552 ಮತ್ತು 11 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 77 (ಅಭಿಷೇಕ್ ರಮಣ್‌ 41, ಅಭಿಮನ್ಯು ಈಶ್ವರನ್‌ 31). ಛತ್ತೀಸಗಡ: 458; ಗೋವಾ: 97 ಓವರ್‌ಗಳಲ್ಲಿ 4ಕ್ಕೆ 223 (ಸುಮಿರನ್ ಅಮೋನ್ಕರ್‌ 79, ಸಗುಣ್ ಕಾಮತ್‌ 47). ಹಿಮಾಚಲ ಪ್ರದೇಶ: 729; ಪಂಜಾಬ್‌: 122 ಓವರ್‌ಗಳಲ್ಲಿ 6ಕ್ಕೆ 484 (ಅಭಿಷೇಕ್ ಗುಪ್ತಾ ಔಟಾಗದೆ 129, ಅಭಿಷೇಕ್ ಶರ್ಮಾ ಔ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry