ಉಸಿರುಗಟ್ಟಿ ನಾಲ್ಕು ಕಾರ್ಮಿಕರ ಸಾವು

ಮಂಗಳವಾರ, ಜೂನ್ 18, 2019
23 °C

ಉಸಿರುಗಟ್ಟಿ ನಾಲ್ಕು ಕಾರ್ಮಿಕರ ಸಾವು

Published:
Updated:
ಉಸಿರುಗಟ್ಟಿ ನಾಲ್ಕು ಕಾರ್ಮಿಕರ ಸಾವು

ಗೌರಿಬಿದನೂರು: ತಾಲ್ಲೂಕಿನ ದಿನ್ನೇನಹಳ್ಳಿಯಲ್ಲಿ ಭಾನುವಾರ ಸಂಪು ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ನಾಲ್ಕು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.

ನಾಗಪ್ಪ (65), ಪೆದ್ದಣ್ಣ ( 39), ನಾರಾಯಣಪ್ಪ(35), ಜನಾರ್ದನ (34) ಮೃತಪಟ್ಟವರು.ನಾಗಪ್ಪ ಮತ್ತು ಪೆದ್ದಣ್ಣ ಸಂಪಿನೊಳಗೆ ಮೊದಲು ಇಳಿದಿದ್ದರು. ಇವರು ಮೇಲೆ ಬಾರದಿದ್ದಾ‌ಗ ಆತಂಕಗೊಂಡ ನಾರಾಯಣಪ್ಪ ಮತ್ತು ಜನಾರ್ದನ್ ಸಹ ಇಳಿದಿದ್ದಾರೆ. ನಾರಾಯಣಪ್ಪ ಸಹ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಜನಾರ್ದನ್ ಅವರು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವಿಗೀಡಾದರು.

ದುರಂತಕ್ಕೆ ಸಂಪ್ ಮಾಲೀಕ ರಾಮಕೃಷ್ಣಪ್ಪ ಕಾರಣ ಎಂದು ಗ್ರಾಮಸ್ಥರು ಅವರನ್ನು ಮನೆಯಲ್ಲಿ ಕೂಡಿ ಹಾಕಿಥಳಿಸಿದ್ದಾರೆ.

ಸ್ಥಳಕ್ಕೆ ಬಂದ ಮಂಚೇನಹಳ್ಳಿ ಪೊಲೀಸರು ರಾಮಕೃಷ್ಣಪ್ಪ ಅವರನ್ನು ಬಂಧಿಸಿದರು. ಪ್ರಕರಣ ದಾಖಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry