ಕಾರಂತರ ನವೀಕೃತ ನಿವಾಸ ನಾಳೆ ಲೋಕಾರ್ಪಣೆ

ಗುರುವಾರ , ಜೂನ್ 20, 2019
26 °C

ಕಾರಂತರ ನವೀಕೃತ ನಿವಾಸ ನಾಳೆ ಲೋಕಾರ್ಪಣೆ

Published:
Updated:
ಕಾರಂತರ ನವೀಕೃತ ನಿವಾಸ ನಾಳೆ ಲೋಕಾರ್ಪಣೆ

ಪುತ್ತೂರು: ಇಲ್ಲಿನ ಪರ್ಲಡ್ಕದ ಬಾಲವನದಲ್ಲಿರುವ ಹಿರಿಯ ಸಾಹಿತಿ ಡಾ.ಕೋಟ ಶಿವರಾಮ ಕಾರಂತರ ಪುನಶ್ಚೇತನಗೊಂಡ ಮನೆಯ ಲೋಕಾರ್ಪಣೆ ಮತ್ತು ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ ಕಾರಂತರ ಜನ್ಮದಿನವಾದ ಮಂಗಳವಾರ ನಡೆಯಲಿದೆ.

ಹಿರಿಯ ಸಾಹಿತಿ ವೈದೇಹಿ ಅವರಿಗೆ ಈ ಬಾರಿಯ ಬಾಲವನ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2010ರಿಂದ ಈ ಪ್ರಶಸ್ತಿ ಜತೆಗೆ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸುಮಾರು ₹ 30 ಲಕ್ಷ ವೆಚ್ಚದಲ್ಲಿ ಕಾರಂತರ ಮನೆಯನ್ನು ಇಂಟ್ಯಾಕ್‌ ಸಂಸ್ಥೆ ಪುನಶ್ಚೇತನಗೊಳಿಸಿದ್ದು, ಕಾರಂತರ ವಸ್ತುಸಂಗ್ರಹಾಲವನ್ನೂ ಪುನಶ್ಚೇತನಗೊಳಿಸಲಾಗಿದೆ ಎಂದು ಬಾಲವನ ಸಮಿತಿಯ ಅಧ್ಯಕ್ಷರೂ ಆದ ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry