ಮಿಂಚಿದ ಪೌಲ್ ಗಿಬ್ಲಿನ್‌

ಭಾನುವಾರ, ಜೂನ್ 16, 2019
22 °C

ಮಿಂಚಿದ ಪೌಲ್ ಗಿಬ್ಲಿನ್‌

Published:
Updated:
ಮಿಂಚಿದ ಪೌಲ್ ಗಿಬ್ಲಿನ್‌

ಚಿಕ್ಕಮಗಳೂರು: ಜಿಲ್ಲೆಯ ಲಾಲ್‌ಬಾಗ್‌ ಎಸ್ಟೇಟ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟ ಸ್ಪರ್ಧೆಯ 110 ಕಿ.ಮೀ ವಿಭಾಗದಲ್ಲಿ ಸ್ಕಾಟ್ಲೆಂಡ್‌ನ ಪೌಲ್ ಗಿಬ್ಲಿನ್‌ ಮಿಂಚು ಹರಿಸಿದರು. 12 ತಾಸು 48 ನಿಮಿಷದಲ್ಲಿ ಗುರಿ ಮುಟ್ಟಿ ಅವರು ಗಮನ ಸೆಳೆದರು.

ಕಳೆದ ವರ್ಷ ಬೆಂಗಳೂರಿನ ಆತ್ರೇಯ ಚಿದಂಬಿ ಈ ದೂರ ಕ್ರಮಿಸಲು 13 ತಾಸು 55 ನಿಮಿಷ ತೆಗೆದುಕೊಂಡಿದ್ದರು.

ಈ ಬಾರಿ ಆತ್ರೇಯ ಚಿದಂಬಿ 13 ಗಂಟೆ 11 ನಿಮಿಷದಲ್ಲಿ ತಲುಪಿ ದ್ವಿತೀಯ ಹಾಗೂ ಸಂಪತ್‌ ಕುಮಾರ್‌ ಸುಬ್ರಮಣಿಯನ್‌ 13 ಗಂಟೆ 22 ನಿಮಿಷದಲ್ಲಿ ಕ್ರಮಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ಈ ವಿಭಾಗಕ್ಕೆ 24 ತಾಸು ಅವಧಿ ನಿಗದಿಪಡಿಸಲಾಗಿತ್ತು.

80 ಕಿ.ಮೀ ವಿಭಾಗದಲ್ಲಿ ಬೆಂಗಳೂರಿನ ಡಿ.ಧರ್ಮೇಂದ್ರ ಒಂಬತ್ತು ತಾಸು 44 ನಿಮಿಷಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹರಿಹಂತ್‌ ರೆಡ್ಡಿ 10 ತಾಸು 24 ನಿಮಿಷದಲ್ಲಿ ಗುರಿ ತಲುಪಿ ದ್ವಿತೀಯ ಹಾಗೂ ಹರಿ 10 ತಾಸು 44 ನಿಮಿಷಗಳಲ್ಲಿ ಕ್ರಮಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ಈ ವಿಭಾಗಕ್ಕೆ 15 ಗಂಟೆ ಅವಧಿ ನಿಗದಿಪಡಿಸಲಾಗಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry