ಗಾಲ್ಫ್‌: ರಾಜುಗೌಡ, ಆನಂದ ಆಯ್ಕೆ

ಬುಧವಾರ, ಜೂನ್ 26, 2019
25 °C

ಗಾಲ್ಫ್‌: ರಾಜುಗೌಡ, ಆನಂದ ಆಯ್ಕೆ

Published:
Updated:
ಗಾಲ್ಫ್‌: ರಾಜುಗೌಡ, ಆನಂದ ಆಯ್ಕೆ

ಬೆಂಗಳೂರು: ನಗರದ ಎಚ್‌.ಬಿ.ರಾಜುಗೌಡ ಮತ್ತು ಆನಂದ ಶ್ರೀನಿವಾಸನ್‌ ಅವರು ಕ್ವಾಲಾಲಂಪುರದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಅಮೆಚೂರ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜ್ಯ ಗಾಲ್ಫ್ ಸಂಸ್ಥೆಯಲ್ಲಿ ನಡೆದ ಒಂಬತ್ತನೇ ವಾರ್ಷಿಕ ಕಾರ್ನರ್‌ ಸ್ಟೋನ್‌ ಕಪ್‌ ಗಾಲ್ಫ್ ಉತ್ಸವದಲ್ಲಿ ಉತ್ತಮ ಸಾಮರ್ಥ್ಯ ತೋರಿಸಿ ಇವರಿಬ್ಬರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇತರ ವಿಭಾಗಗಗಳಲ್ಲಿ ದೆಹಲಿಯ ಉದಯ್‌ ಕುಮಾರ್, ಬೆಂಗಳೂರಿನ ಪ್ರತಾಪ್‌ ಸಿಂಗ್‌, ಮುಂಬೈನ ಹರೇಶ್ ಪಟೇಲ್‌ ಆಯ್ಕೆಯಾಗಿದ್ದಾರೆ.

ನಾಲ್ಕು ದಿನ ನಡೆದ ಗಾಲ್ಫ್ ಉತ್ಸವದಲ್ಲಿ ಹಿರಿಯ ಕ್ರಿಕೆಟಿಗರಾದ ಕಪಿಲ್‌ದೇವ್‌, ವೆಂಕಟೇಶ ಪ್ರಸಾದ್‌, ವೆಂಕಟಪತಿ ರಾಜು, ಸುಜಿತ್ ಸೋಮಸುಂದರ್‌, ಅಥ್ಲೀಟ್ ಅಶ್ವಿನಿ ನಾಚಪ್ಪ, ಭಾರತ ಕ್ರಿಕೆಟ್ ತಂಡದ ಆಟಗಾರ ಕರುಣ್ ನಾಯರ್‌ ಮುಂತಾದವರು ಪಾಲ್ಗೊಂಡು ಗಮನ ಸೆಳೆದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry