ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮಿಸ್ ಗಾಲಿಕುರ್ಚಿ ಸೌಂದರ್ಯ ಸ್ಪರ್ಧೆ: ಚಿಚಿಕೊವಗೆ ಪ್ರಶಸ್ತಿ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಾರ್ಸಾ: ಬೆಲಾರಸ್‌ ದೇಶದ ಮನೋವಿಜ್ಞಾನದ ವಿದ್ಯಾರ್ಥಿನಿ ಅಲೆಕ್ಸಾಂಡ್ರಾ ಚಿಚಿಕೊವ (23) ವಿಶ್ವ ಮಿಸ್ ಗಾಲಿಕುರ್ಚಿ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

‘ನಿಮ್ಮ ಆತಂಕ ಮತ್ತು ಭೀತಿಯ ಜತೆಗೆ ಹೋರಾಡಿರಿ’ ಎಂದು ಸ್ಪರ್ಧೆಯ ಬಳಿಕ ಚಿಚಿಕೊವ ಹೇಳಿದ್ದಾರೆ. ಪೋಲೆಂಡ್ ಮೂಲದ ಒನ್ಲಿ ಒನ್ ಸಂಸ್ಥೆ ಇದೇ ಮೊದಲ ಬಾರಿಗೆ ಈ ವಿಶ್ವ ಮಿಸ್ ಗಾಲಿಕುರ್ಚಿ ಸೌಂದರ್ಯ ಸ್ಪರ್ಧೆಯನ್ನು ವಾರ್ಸಾದಲ್ಲಿ ಆಯೋಜಿಸಿತ್ತು.

‘ಗಾಲಿಕುರ್ಚಿ ಅವಲಂಬಿಸಿರುವ ಮಹಿಳೆಯರ ಕುರಿತ ಅಭಿಪ್ರಾಯವನ್ನು ಮತ್ತು ಕೇವಲ ಗಾಲಿಕುರ್ಚಿಯಿಂದಾಗಿ ಅವರ ವ್ಯಕ್ತಿತ್ವ ನಿರ್ಣಯಿಸುವ ರೀತಿಯನ್ನು ಬದಲಿಸುವುದು’ ಈ ಸ್ಪರ್ಧೆಯ ಉದ್ದೇಶವಾಗಿತ್ತು ಎಂದು ಸ್ಪರ್ಧೆಯ ಸಹ ಸಂಸ್ಥಾಪಕಿ ಕ್ಯಾಟರ್ಜಿನಾ ವುಟಾಜೆಕ್ ಜಿನಾಲ್ಸ್ಕ ತಿಳಿಸಿದ್ದಾರೆ. ಸ್ವತಃ ಇವರು ಗಾಲಿಕುರ್ಚಿ ಆಶ್ರಯಿಸಿದವರಾಗಿದ್ದಾರೆ. ಪ್ರಪಂಚದ ಹಲವು ಭಾಗಗಳಲ್ಲಿ ಗಾಲಿಕುರ್ಚಿಯನ್ನು ಐಷಾರಾಮಿಯಾಗಿಯೂ ಬಳಸಲಾಗುತ್ತಿದೆ ಎನ್ನುವುದನ್ನು ತೋರಿಸುವುದಕ್ಕಾಗಿ ಈ ಸ್ಪರ್ಧೆ ಏರ್ಪಡಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ವ್ಯಕ್ತಿತ್ವಕ್ಕೆ ಆದ್ಯತೆ

‘ಸ್ಪರ್ಧೆಗೆ ಸೌಂದರ್ಯ ಪರಿಗಣನೆಯಾಗುತ್ತದೆ. ಆದರೆ ಜತೆಗೆ ಯುವತಿಯರ ವ್ಯಕ್ತಿತ್ವ, ದಿನನಿತ್ಯದ ಅವರ ಚಟುವಟಿಕೆಗಳು, ಅವರ ಪಾಲ್ಗೊಳ್ಳುವಿಕೆ, ಸಾಮಾಜಿಕ ಜೀವನ, ಅವರ ಯೋಜನೆಗಳನ್ನು ಸಹ ಪರಿಗಣಿಸಲಾಗಿತ್ತು’ ಎಂದು ಕ್ಯಾಟರ್ಜಿನಾ ತಿಳಿಸಿದ್ದಾರೆ.

ಎನ್‌ಜಿಒಗಳ ಮೂಲಕ ರಾಷ್ಟ್ರೀಯ ಮಟ್ಟದ ಸುತ್ತುಗಳಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ವಾರ್ಸಾದಲ್ಲಿ ಎಂಟು ದಿನ ನಡೆದ ಪೂರ್ವಭಾವಿ ತಯಾರಿ ಹಾಗೂ ಚಟುವಟಿಕೆಗಳಲ್ಲಿ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT