ಸ್ವಾಭಿಮಾನಿಗಳಿಗೆ ಕಾಂಗ್ರೆಸ್‌ನಲ್ಲಿ ಬೆಲೆಯಿಲ್ಲ: ಶಂಕರ್‌

ಭಾನುವಾರ, ಮೇ 26, 2019
32 °C

ಸ್ವಾಭಿಮಾನಿಗಳಿಗೆ ಕಾಂಗ್ರೆಸ್‌ನಲ್ಲಿ ಬೆಲೆಯಿಲ್ಲ: ಶಂಕರ್‌

Published:
Updated:
ಸ್ವಾಭಿಮಾನಿಗಳಿಗೆ ಕಾಂಗ್ರೆಸ್‌ನಲ್ಲಿ ಬೆಲೆಯಿಲ್ಲ: ಶಂಕರ್‌

ಬನ್ನೂರು: ‘ಆತ್ಮಗೌರವ, ಸ್ವಾಭಿಮಾನ ಇದ್ದವರಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಬೆಲೆಯೇ ಇಲ್ಲ. ಇದರಿಂದ ಬೇಸತ್ತು ಪಕ್ಷದಿಂದ ಹೊರಬಂದಿದ್ದೇನೆ’ ಎಂದು ಹಿರಿಯ ರಾಜಕಾರಣಿ ಎಸ್‌.ಶಂಕರ್‌ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ತಮ್ಮ ಬೆಂಬಲಿಗರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಹಲವರು ಹಣ ಮಾಡಲು ಮಾತ್ರ ರಾಜಕೀಯಕ್ಕೆ ಬರುತ್ತಾರೆ. ಆದರೆ, ನಾನು ಸೇವಾಭಾವದಿಂದ ಕಾಂಗ್ರೆಸ್‌ ಸಂಘಟನೆಗಾಗಿ ಸಾಕಷ್ಟು ದುಡಿದಿದ್ದೇನೆ. ಎಡಗೈ ದಲಿತ ಜನಾಂಗಕ್ಕೆ ಸೇರಿದ ನನ್ನನ್ನು ಪ್ರತಿಬಾರಿ ಟಿಕೆಟ್‌ನಿಂದ ವಂಚಿಸಲಾಗಿದೆ. ನಾನೇನು ರಾಜಕೀಯದಲ್ಲಿ ಸನ್ಯಾಸಿಯಾಗಿ ಉಳಿಯಲು ಬಂದಿಲ್ಲ. ಹಿಂದುಳಿದ ಸಮಾಜದ ಏಳಿಗೆಗೆ ಶ್ರಮಿಸುವುದು ನನ್ನ ಉದ್ದೇಶ’ ಎಂದು ಅವರು ಹೇಳಿದರು.

‘ಐಶಾರಾಮಿ ಕಾರಿನಲ್ಲಿ ಓಡಾಡುವ ಉಸ್ತುವಾರಿ ಸಚಿವರಿಗೆ ಬಡವರ, ದಲಿತರ ನೋವು ಕಾಣಿಸುತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿಶೂನ್ಯವಾಗಿದೆ ಎಂದು ಹರಿಹಾಯ್ದ ಅವರು, ಕ್ಷೇತ್ರದಲ್ಲಿ ಸೇವೆ ಮಾಡಲು ಜನರು ನನಗೂ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಚಲನಚಿತ್ರ ನಟ ಪವನ್‌ತೇಜ್, ಚನ್ನಪ್ಪ, ಹೆಗ್ಗೂರು ಶಂಬುರಾಜ್, ಬನ್ನೂರು ರಾಜಣ್ಣ, ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಜವರಯ್ಯ, ರಾಜಣ್ಣ, ಜಾಮಿಯಾ ಮಹಜೂದ್‌, ನಯನ್‌ಗೌಡ, ಮಹದೇವ ಸಾಗರ್, ಮಲಿಯೂರು ದೊಳ್ಳಯ್ಯ, ದೊಡ್ಡಮ್ಮ, ಶಶಿಕಲಾ, ಅನ್ನಪೂರ್ಣಾ, ನೂರ್ ಅಹಮದ್‌, ಅಯರ್‌ಪಾಷ, ಅಕ್ರಂ ಪಾಷ, ಸೈಯದ್‌ ಪಾಷ, ನಾಜೀಂ ಪಾಷ, ಕಾರ್ ಮಹೇಶ್, ಅಪ್ಪಾಜಿ, ಶ್ರೀನಿವಾಸ್ ಮೂರ್ತಿ, ಮರಿಬಸಮ್ಮ, ಬಸವಯ್ಯ, ಬಂಗಾರಿ, ಶಿವಣ್ಣ, ದೊಡ್ಡಮುಲಗೂಡು ರಮೇಶ್‌, ಕಿಟ್ಟಿ, ಶಿವಕುಮಾರ್, ನಾಗರಾಜು, ಮಂಜು, ಶಿವು, ಪ್ರಸಾದ್, ಕಾಂತರಾಜು, ರೇವಣ್ಣ, ಶ್ಯಾಮಣ್ಣ, ರಾಧಾಕೃಷ್ಣ, ಖಾನ್‌ದಾನ್, ಶಿವಣ್ಣ, ಗಾಣಿಕೊಪ್ಪಲು ಸತೀಶ, ಗೋವಿಂದಣ್ಣ, ಬಸವರಾಜು ಸೇರಿದಂತೆ ನೂರಾರು ಜನ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry