'ದಿ ವೈರ್' ಸುದ್ದಿ ಜಾಲತಾಣದಲ್ಲಿ ಪ್ರಕಟವಾದ ಲೇಖನಕ್ಕೆ ಜಯ್ ಷಾ ಪ್ರತಿಕ್ರಿಯೆ

ಗುರುವಾರ , ಜೂನ್ 27, 2019
23 °C

'ದಿ ವೈರ್' ಸುದ್ದಿ ಜಾಲತಾಣದಲ್ಲಿ ಪ್ರಕಟವಾದ ಲೇಖನಕ್ಕೆ ಜಯ್ ಷಾ ಪ್ರತಿಕ್ರಿಯೆ

Published:
Updated:
'ದಿ ವೈರ್' ಸುದ್ದಿ ಜಾಲತಾಣದಲ್ಲಿ ಪ್ರಕಟವಾದ ಲೇಖನಕ್ಕೆ ಜಯ್ ಷಾ ಪ್ರತಿಕ್ರಿಯೆ

ನವದೆಹಲಿ: ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಮಗ ಜಯ್ ಷಾ ಅವರ ಕಂಪೆನಿ ಅಕ್ರಮ ವಹಿವಾಟು ನಡೆಸಿದೆ’ ಎಂದು ದಿ ವೈರ್ ಸುದ್ದಿ ಜಾಲತಾಣ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಅಲ್ಲಗೆಳೆದಿರುವ ಜಯ್ ಷಾ, ಸುದ್ದಿ ಜಾಲತಾಣದ ಸಿಬ್ಬಂದಿ ವಿರುದ್ಧ ₹ 100 ಕೋಟಿ ಮಾನನಷ್ಟ ಪರಿಹಾರ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

ದಿ ವೈರ್‍‍ನಲ್ಲಿ ಪ್ರಕಟವಾದ ಸುದ್ದಿ ಬಗ್ಗೆ  ಜಯ್ ಷಾ ಪ್ರತಿಕ್ರಿಯೆ ಹೀಗಿದೆ.

ಇವತ್ತು ಬೆಳಗ್ಗೆ ದಿ ವೈರ್ ಸುದ್ದಿಜಾಲತಾಣದಲ್ಲಿ ರೋಹಿಣಿ ಸಿಂಗ್ ಅವರು ಬರೆದಿರುವ 'The Golden Touch of Jay Amit Shah' ಎಂಬ ಲೇಖನ ನೋಡಿದೆ. ಸಿದ್ದಾರ್ಥ್ ವರದರಾಜನ್ ಅವರು ಈ ಸುದ್ದಿ ಜಾಲತಾಣದ ಸಂಪಾದಕರು.

ಲೇಖನದಲ್ಲಿ ಹೇಳಿರುವ ವಿಷಯಗಳು ಸತ್ಯಕ್ಕೆ ದೂರವಾಗಿದ್ದು, ನನ್ನ ಮೇಲೆ ವ್ಯಥಾ ಆರೋಪಗಳನ್ನು ಮಾಡಲಾಗಿದೆ. ನನ್ನ ಅಪ್ಪ ಅಮಿತ್ ಷಾ ಅವರ ರಾಜಕೀಯ ಸ್ಥಾನಮಾನದಿಂದಾಗಿಯೇ ನಾನು ನನ್ನ ಉದ್ಯಮದಲ್ಲಿ ಯಶಸ್ಸು ಸಾಧಿಸಿದ್ದೇನೆ ಎಂದು ಈ ಲೇಖನದಲ್ಲಿ ಬಿಂಬಿಸಲಾಗಿದೆ.

ನನ್ನ ಉದ್ಯಮ ವ್ಯವಹಾರದಲ್ಲಿ ನಾನು ಯಾವುದೇ ರೀತಿಯ ಅಕ್ರಮಗಳನ್ನೆಸಗಿಲ್ಲ. ನಾನು ಯಾವುದೇ ರೀತಿಯಲ್ಲಿ ಕಾನೂನು ಬಾಹಿರ ವ್ಯವಹಾರಗಳನ್ನು ನಡೆಸಿಲ್ಲ ಎಂಬುದಕ್ಕೆ ತೆರಿಗೆ ದಾಖಲೆ ಮತ್ತು ಬ್ಯಾಂಕಿಂಗ್ ವ್ಯವಹಾರಗಳ ದಾಖಲೆಗಳಲ್ಲಿ ಸಾಕ್ಷ್ಯವಿದೆ. ನಾನು ಕಾರ್ಪೊರೇಟಿವ್ ಬ್ಯಾಂಕ್‍ನ  ನಾನ್ ಫಂಡೆಂಡ್ ಕ್ರೆಡಿಟ್ ಫೆಸಿಲಿಟೀಸ್ ಅಥವಾ  ಎನ್‍ಬಿಎಫ್‍ಸಿಯಿಂದ ಸಾಲ ಪಡೆದಿರುವುದು ನಿಯಮಾನುಸಾರವಾಗಿದೆ. ಸಾಲದ ಅವಧಿಯೊಳಗೆಯೇ ನಾನು ಚೆಕ್ ಮೂಲಕ ಬಡ್ಡಿಯನ್ನು ಸೇರಿಸಿ ಆ ಸಾಲ ಪಾವತಿ ಮಾಡಿದ್ದೇನೆ. ಸಾಲ ಪಡೆಯುವುದಕ್ಕಾಗಿ ನಾನು ನನ್ನ ಕುಟುಂಬದ ಸೊತ್ತನ್ನು ಕಾರ್ಪರೇಟಿವ್ ಬ್ಯಾಂಕ್‍ನಲ್ಲಿ ಒತ್ತೆಯಿಟ್ಟಿದ್ದೆ.

ಈ ವ್ಯವಹಾರಗಳ ವಿವರಗಳನ್ನು ಈಗಾಗಲೇ ನನ್ನ ವಕೀಲರು ಪ್ರಸ್ತುತ ಸುದ್ದಿ ಜಾಲತಾಣಕ್ಕೆ ನೀಡಿದ್ದು, ಅಲ್ಲಿ ಲೇಖಕರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ನನಗೆ ಇಲ್ಲಿ ಏನನ್ನೂ ಬಚ್ಚಿಡುವ ಅಗತ್ಯವಿಲ್ಲ.

ನನ್ನ ವಿರುದ್ಧ ಈ ರೀತಿ ವ್ಯಥಾರೋಪ ಹೊರಿಸಿ ನನ್ನ ಘನತೆಗೆ ಧಕ್ಕೆ ತಂದಿದ್ದಕ್ಕೆ  ಆ ಸುದ್ದಿ ಜಾಲತಾಣದ ಮಾಲೀಕರು, ಸಂಪಾದಕರು ಮತ್ತು ಲೇಖಕರ ವಿರುದ್ಧ ₹ 100 ಕೋಟಿ ಮಾನನಷ್ಟ ಪರಿಹಾರ ಮೊಕದ್ದಮೆ ಹೂಡುತ್ತೇನೆ. ಈ ಎಲ್ಲ ಕಾನೂನು ಕ್ರಮಗಳು ಅಹಮದಾಬಾದ್‍ನಲ್ಲಿಯೇ ನಡೆಯಲಿದೆ.

ಒಂದು ವೇಳೆ ದಿ ವೈರ್ ಲೇಖನವನ್ನು  ಬೇರೆ ಯಾರಾದರೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮರು ಪ್ರಕಟ ಮಾಡಿದರೆ ಅಂಥವರ ವಿರುದ್ಧ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry