ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರಖಪುರದ ಬಿಆರ್‍‌ಡಿ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 16 ಮಕ್ಕಳ ಸಾವು!

Last Updated 9 ಅಕ್ಟೋಬರ್ 2017, 12:10 IST
ಅಕ್ಷರ ಗಾತ್ರ

ಉತ್ತರಪ್ರದೇಶ: ಗೋರಖಪುರದಲ್ಲಿರುವ ಬಾಬಾ ರಾಘವ್ ದಾಸ್ (ಬಿಆರ್‍‍ಡಿ) ವೈದ್ಯಕೀಯ ಕಾಲೇಜಿನಲ್ಲಿ ಕಳೆದ 24 ಗಂಟೆಗಳಲ್ಲಿ 16 ಮಕ್ಕಳು ಸಾವಿಗೀಡಾಗಿದ್ದಾರೆ. ಎರಡು ತಿಂಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆ ಕೊರತೆಯಿಂದಾಗಿ 63 ಮಕ್ಕಳು ಸಾವಿಗೀಡಾಗಿದ್ದರು.
ನಿಯೋನಾಟಲ್ ಇಂಟೆನ್ಸಿವ್ ಕೇರ್ ಯುನಿಟ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ಕಂದಮ್ಮಗಳು ಮತ್ತು ಮಕ್ಕಳ ಐಸಿಯುವಿನಲ್ಲಿ ಚಿಕಿತ್ಸೆಯಲ್ಲಿದ್ದ 6 ಮಕ್ಕಳು ಸಾವಿಗೀಡಾಗಿರುವುದಾಗಿ ಆಸ್ಪತ್ರೆಯ ಮೂಲಗಳು ಹೇಳಿವೆ.

ಮಾಧ್ಯಮ ವರದಿಗಳ ಪ್ರಕಾರ ಸಾವಿಗೀಡಾಗಿರುವ ಮಕ್ಕಳ ಪೈಕಿ 6 ಮಕ್ಕಳು ಡಿಯೋರಿಯಾ,  ಇಬ್ಬರು ಖುಷಿನಗರ,  ಗೋರಖಪುರ -4 ಮತ್ತು ಮಹಾರಾಜ್ ಗಂಜ್‍ ಮೂಲದ 4 ಮಕ್ಕಳು, ಬಸ್ತಿ -1 ಮತ್ತು ಬಲರಾಮಪುರದಿಂದ ಒಂದು ಮಗು  ಸಾವಿಗೀಡಾಗಿದೆ.

ಸಾವಿಗೀಡಾಗಿರುವ ಮಕ್ಕಳು ಮೆದುಳು ಜ್ವರದಿಂದ ಬಳಲುತ್ತಿದ್ದರು. ಇದೇ ಆಸ್ಪತ್ರೆಯಲ್ಲಿ ಬಿಹಾರ ಮೂಲದ ಐವರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.
ಆಸ್ಪತ್ರೆಯ ಮೂಲಗಳ ಪ್ರಕಾರ 2017  ಜನವರಿ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 1,470 ರೋಗಿಗಳು ಇಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು ಇದರಲ್ಲಿ 310 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT