ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಉಡುಗೊರೆ: 100 ಮಹಿಳಾ ವ್ಯಾಪಾರಿಗಳಿಗೆ ಸೌರ ದೀಪ ನೀಡಲು ಮುಂದಾಗಿರುವ ಬೆಂಗಳೂರಿನ ಯುವಕ

Last Updated 9 ಅಕ್ಟೋಬರ್ 2017, 12:11 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಆಕರ್ಷ್‌ ಶ್ಯಾಮನೂರ್‌ ಎಂಬ ಯುವಕ, ಕತ್ತಲಲ್ಲಿ ವ್ಯಾಪಾರ ಮಾಡುವ ನೂರು ಮಹಿಳಾ ವ್ಯಾಪಾರಿಗಳಿಗೆ ಸೌರ ದೀಪ ನೀಡಲು ಮುಂದಾಗಿದ್ದಾರೆ.

100 ಮಹಿಳಾ ವ್ಯಾಪಾರಿಗಳು ಈ ದೀಪಾವಳಿಗೆ ಆಕರ್ಷ್‌ ಶ್ಯಾಮನೂರ್‌ ಅವರಿಂದ ಬೆಳಕಿನ ಉಡುಗೊರೆ (ಸೌರ ದೀಪ) ಪಡೆಯಲ್ಲಿದ್ದಾರೆ.

ಇವರ ಹೆಸರು ಮಂಜುಳಾ ದೇವಿ. ಜಯನಗರದ 9ನೇ ಬ್ಲಾಕ್‌ನಲ್ಲಿರುವ ಬೀದಿಯೊಂದರಲ್ಲಿ ತರಕಾರಿ ವ್ಯಾಪಾರ ಮಾಡುತ್ತಾರೆ. ಪ್ರತಿ ದಿನ ಮುಂಜಾನೆ 3 ಗಂಟೆಗೆ ಮಂಜುಳಾ ದೇವಿಯವರ ದೈನಂದಿನ ಜೀವನ ಆರಂಭವಾಗುತ್ತದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ತರಕಾರಿ ವ್ಯಾಪಾರ ಮಾಡುತ್ತಾರೆ. ಹಗಲಿನಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ, ಆದರೆ ರಾತ್ರಿ ಹೊತ್ತಿನಲ್ಲಿ ಬೆಳಕಿನ ಸಮಸ್ಯೆಯಿಂದ ವ್ಯಾಪಾರವನ್ನು ನಿಲ್ಲಿಸಬೇಕಾಗುತ್ತದೆ ಎಂದು ಮಂಜುಳಾ ದೇವಿ ಹೇಳುತ್ತಾರೆ.

ಬೆಳಕಿನ ಕೊರತೆ ಹಾಗೂ ಬೀದಿ ದೀಪಗಳ ಸರಿಯಾದ ನಿರ್ವಹಣೆ ಇಲ್ಲದೆ ಇರುವುದರಿಂದ ರಾತ್ರಿ ವೇಳೆಯಲ್ಲಿ ವ್ಯಾಪಾರ ನಡೆಸಲು ತೊಂದರೆಯಾಗುತ್ತಿದೆ. ಇದರಿಂದ ₹ 500 ರಿಂದ ₹1000 ರದವರೆಗೂ ನಷ್ಟವಾಗುತ್ತದೆ ಎಂದು ಅವರು ಹೇಳುತ್ತಾರೆ. ಮನೆಯಿಂದ ಗ್ಯಾಸ್‌ ಲಾಟೀನ್‌ ತಂದು ವ್ಯಾಪಾರ ಮಾಡಬೇಕಾಗುತ್ತದೆ. ಅದು ಕೂಡ ಮಂದ ಬೆಳಕಿನಲ್ಲಿ! ಈ ಲಾಟೀನ್‌ ಗ್ಯಾಸ್‌ಗಾಗಿ ವಾರಕ್ಕೆ 250 ರೂಪಾಯಿ ವೆಚ್ಚವಾಗುತ್ತದೆ.  ಇದೇನಾದರೂ ರಿಫೇರಿಗೆ ಬಂದರಂತೂ ₹ 500 ತೆರಬೇಕಾಗುತ್ತದೆ. ಬೆಳಕಿನ ಕೊರತೆಯಿಂದ ನಿತ್ಯ ₹ 500 ರಿಂದ ₹1000 ನಷ್ಟವಾಗುತ್ತಿದೆ. ಇದೇ ಸಮಸ್ಯೆಯನ್ನು ಸಾವಿರಾರು ಜನ  ಬೀದಿ ವ್ಯಾಪಾರಿಗಳು ಎದುರಿಸುತ್ತಿದ್ದಾರೆ ಎಂದು ಮಂಜುಳಾ ದೇವಿ ಹೇಳುತ್ತಾರೆ.

ಈ ಸಮಸ್ಯೆಯನ್ನು ಗಮನಿಸಿದ ಬೆಂಗಳೂರಿನ ಆಕರ್ಷ್‌ ಶ್ಯಾಮನೂರ್‌ 100 ಮಹಿಳೆಯರಿಗೆ ಪ್ರಖರವಾಗಿ ಬೆಳಗುವ ಸೌರ ದೀಪಗಳನ್ನು ನೀಡಲು ಮುಂದಾಗಿದ್ದಾರೆ. ಈ ದೀಪಾವಳಿಗೆ ಸೌರದೀಪಗಳನ್ನು ನೀಡಲಿದ್ದಾರೆ. ಆಕರ್ಷ್‌ ಶ್ಯಾಮನೂರ್‌ ಅರ್ಬನ್ ಮ್ಯಾನೇಜ್‌ಮೆಂಟ್‌ ಅಂಡ್‌ ಡೆವಲ‌ಪ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನೆದರ್‌ಲ್ಯಾಂಡ್‌ನಲ್ಲಿ ಪುನರ್‌ನವೀಕರಣ ಇಂಧನ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

’ನಾನು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಸಂಪರ್ಕಿಸಿದೆ. ಅವರ ನೆರವಿನಿಂದ ಬೀದಿ ಬದಿಯಲ್ಲಿ ತರಕಾರಿ, ಹಣ್ಣು ಮತ್ತು ಹೂ ವ್ಯಾಪಾರ ಮಾಡುವ ನೂರು ಮಹಿಳೆಯರನ್ನು ಗುರುತಿಸಿದೆ. ಕತ್ತಲಲ್ಲಿ ವ್ಯಾಪಾರ ನಡೆಸುವ ಅವರಿಗೆ ಸೌರ ದೀಪ ನೀಡುವುದಾಗಿ’  ಆಕರ್ಷ್‌ ಶ್ಯಾಮನೂರ್‌ ಅವರು ತಮ್ಮ ಕ್ರೌಡ್‌ಫಡಿಂಗ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಹಲವು ಬೀದಿ ಬದಿ ವ್ಯಾಪಾರಿಗಳನ್ನು ಮಾತನಾಡಿಸಿ ವಿಡಿಯೊ ಮಾಡಿ ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. #BePoliteDiwali ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.

ಆಕರ್ಷ್‌ ಅವರ ಕೆಲಸದೊಂದಿಗೆ ಕೈಜೋಡಿಸಲು ಇಚ್ಛಿಸಿದವರು ಹಣ ಸಹಾಯ ಮಾಡಬಹುದು. ಕ್ರೌಡ್‌ ಫಂಡಿಂಗ್‌ಗೆ ವೆಬ್‌ವಿಳಾಸ: milaap.org/fundraisers/bepolite.

ಸುದ್ದಿ ಲಿಂಕ್: http://bit.ly/2z9KEQ7

ಮಾಹಿತಿ ಕೃಪೆ: www.thebetterindia.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT