ಮಂಗಳವಾರ, ಸೆಪ್ಟೆಂಬರ್ 17, 2019
21 °C

ಹಾಡಿನ ಉಡುಗೊರೆ

Published:
Updated:
ಹಾಡಿನ ಉಡುಗೊರೆ

‘ಮುಂಜಾನೆದ್ದು ಟಿವಿ ಹಾಕಿದ್ರೆ ಇವರದ್ದೇನೆ ಸುಪ್ರಭಾತ, ಸಂಜೆ ಎಣ್ಣೆ ಹೊಡಿಯೊರಿಗೆಲ್ಲಾ ಇವರೇ ಗುರುವೇ ದೇವಧೂತ..’ ಹೀಗೊಂದು ಹಾಡು ಯುಟ್ಯೂಬ್‌ನಲ್ಲಿ ಹರಿದಾಡುತ್ತಿದೆ. ಇದು ನಿರ್ದೇಶಕ ಯೋಗರಾಜಭಟ್‌ ಅವರ ಹುಟ್ಟುಹಬ್ಬಕ್ಕಾಗಿ ಗೆಳೆಯರು ಸೇರಿ ಮಾಡಿರುವ ವಿಡಿಯೊ. ಹೈ ಬೀಟ್ಸ್‌, ಈ ಹಾಡಿಗೆ ಪಡ್ಡೆ ಹುಡುಗರು ಟಪಾಂಗುಚ್ಚಿ  ಹಾಕುತ್ತಿದ್ದಾರೆ. ಈ ಹಾಡನ್ನು ಬರೆದು ನಿರ್ದೇಶನ ಮಾಡಿರುವುದು ಆಂಜೀನಯ್ಯ. ಸಂತೋಷ್‌ ವೆಂಕಿ ಹಾಡಿದ್ದಾರೆ. ಸಂಗೀತ ಸಂಯೋಜನೆ ಮಾಡಿರುವುದು ಕೆವಿನ್ ಎಂ. ಈ ಹಾಡು ಶ್ರೀಮಲ್ಲೇಶ್ವರಸ್ವಾಮಿ ಮತ್ತು ಶ್ರೀಗಾಯತ್ರಿದೇವಿ ಕಂಬೈನ್ಸ್‌ ಸಂಸ್ಥೆ ವತಿಯಿಂದ ನಿರ್ಮಾಣವಾಗಿದೆ.

ಯೋಗರಾಜ ಭಟ್‌ ನಿರ್ದೇಶನದ ಸಿನಿಮಾ ಹೆಸರುಗಳನ್ನೆಲ್ಲಾ ಜೋಡಿಸಿ ಈ ಹಾಡನ್ನು ಕಟ್ಟಿದ್ದಾರೆ. ಕೆಲವರು ಸಾಹಿತ್ಯದ ಕಡೆ ಗಮನ ಕೊಡದೆ ಸಂಗೀತವನ್ನು ಖುಷಿಯಿಂದ ಕೇಳಿದರೆ ಕೆಲವರು ಸಾಹಿತ್ಯ ಕೆಟ್ಟದಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

ವಿಡಿಯೊ ನೋಡಲು ಕೊಂಡಿ: bit.ly/2fWU21q

Post Comments (+)