ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮ್ಮಂದಿರು ಕೆಲಸ ಮಾಡುತ್ತಿದ್ದರೆ, ಅಪ್ಪಂದಿರು ವಿಶ್ರಾಂತಿ ಪಡೆಯುತ್ತಾರೆ’ ಯಾಕೆ ಹೀಗೆ?

Last Updated 9 ಅಕ್ಟೋಬರ್ 2017, 14:25 IST
ಅಕ್ಷರ ಗಾತ್ರ

ವಾಷಿಂಗ್ಟನ್‌:  ಗಂಡ ಹೆಂಡತಿ ಇಬ್ಬರೂ ಹೊರಗೆ ದುಡಿಯುತ್ತಿರುವ, ಸುಶಿಕ್ಷಿತ ಕುಟುಂಬಗಳಲ್ಲಿ ಲಿಂಗ ಅಸಮಾನತೆ ಇನ್ನೂ ಜೀವಂತವಾಗಿದೆ. ರಜಾ ದಿನಗಳಲ್ಲಿ ಅಮ್ಮಂದಿರುವ ಮನೆಗೆಲಸ ಮತ್ತು ಮಕ್ಕಳ ಪಾಲನೆ ಮಾಡುತ್ತಿದ್ದರೆ ಅಪ್ಪಂದಿರುವ ಯಾವುದೇ ಕೆಲಸ ಮಾಡದೇ ಕಾಲ ಕಳೆಯುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೆಲ ದಂಪತಿಗಳಿಗೆ ಮೊದಲ ಮಗು ಹುಟ್ಟಿದ ಮೂರು ತಿಂಗಳವರೆಗೆ ಈ ಅಧ್ಯಯನ ನಡೆಸಲಾಗಿದೆ. ಆ ಸಮಯದಲ್ಲಿ ಇಬ್ಬರೂ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದರು. ಆದರೆ ಪತ್ನಿಯರು ಮನೆಗೆಲಸ, ಮಗುವಿನ ಪಾಲನೆಯಲ್ಲಿ ತಲ್ಲೀನರಾಗಿದ್ದರೆ, ಪತಿಯಂದಿರು ವಿಶ್ರಾಂತಿ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎಂದು ವರದಿ ಗುರುತಿಸಿದೆ.

ಇದಕ್ಕೆ ವಿರುದ್ಧವಾಗಿ ಪತಿ ಮನೆಗೆಲಸ ಮಾಡುತ್ತಿದ್ದರೆ ಪತ್ನಿ ಸಹಾಯ ಮಾಡುತ್ತಿದ್ದರು. ಹೆಚ್ಚಿನ ಕುಟುಂಬಗಳಲ್ಲಿ ಇದು ಸಾಮಾನ್ಯ ನಡವಳಿಕೆಯಾಗಿತ್ತು ಎಂದು ವರದಿ ಹೇಳಿದೆ.

ಪತಿ ಮನೆಗೆಲಸ, ಮಕ್ಕಳ ಪಾಲನೆಯಲ್ಲಿ ತೊಡಗಿದ್ದಾಗ ಪತ್ನಿ ಕೇವಲ 46ರಿಂದ 49 ನಿಮಿಷ ವಿಶ್ರಾಂತಿ ಪಡೆದಿರುವುದು ಮತ್ತು ಪತ್ನಿ ಕೆಲಸ ಮಾಡುವಾಗ ಪತಿ ಅದಕ್ಕಿಂತ ಎರಡು ಪಟ್ಟು ಅಂದರೆ ಸುಮಾರು 101 ನಿಮಿಷ ವಿಶ್ರಾಂತಿ ಪಡೆದಿರುವುದು ಅಧ್ಯಯನದಿಂದ ಗೊತ್ತಾಗಿದೆ.

‘ಹೆಚ್ಚು ಸಮಾನತೆಯ ದೃಷ್ಟಿಕೋನವನ್ನು  ಹೊಂದಿದ್ದ ದಂಪತಿಗಳೂ ಮನೆಗೆಲಸವನ್ನು ಸಮಾನವಾಗಿ ಹಂಚಿಕೊಂಡಿಲ್ಲ. ಇದು ನಿರಾಶಾದಾಯಕ ಬೆಳವಣಿಗೆ’ ಎಂದು ಅಮೆರಿಕದ ಓಹಿಯೋ ಸ್ಟೇಟ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕ್ಲೇರ್ ಕ್ಯಾಂಪ್ ದೂಶ್ ಹೇಳಿದ್ದಾರೆ.

ಈ ವರದಿ ‘ಸೆಕ್ಸ್‌ ರೋಲ್ಸ್‌’ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಮೊದಲ ಮಗು ಹೊಂದಿದ್ದ 52 ದಂಪತಿಯ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಕೆಲಸಕ್ಕೆ ಹೋಗುತ್ತಿದ್ದ ದಿನಗಳು, ಮಹಿಳೆ ಗರ್ಭಧರಿಸಿದ ನಂತರದ ಮೂರು ತಿಂಗಳು ಮತ್ತು ಮಗು ಜನಿಸಿದ ನಂತರದ ಮೂರು ತಿಂಗಳು ತಮ್ಮ ದಿನಚರಿಯನ್ನು ಬರೆದಿಡುವಂತೆ ತಿಳಿಸಲಾಗಿತ್ತು. ಗಂಡಸರು ರಜಾದಿನಗಳಲ್ಲಿ ಶೇ 46ರಷ್ಟು ಸಮಯ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಮಹಿಳೆಯರು ಎರಡು ಪಟ್ಟು ಕೆಲಸ ಮಾಡುತ್ತಿರುವುದು ಅಧ್ಯಯನದಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT