ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಗಿಗೆ ಉನ್ನತ ಹುದ್ದೆ ನೀಡಿದ ಕಿಮ್

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಟೋಕಿಯೊ: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ತಮ್ಮ ಕಿರಿಯ ತಂಗಿ ಕಿಮ್ ಯೊ ಜಾಂಗ್ ಅವರಿಗೆ ಆಡಳಿತಾರೂಢ ಪಕ್ಷದಲ್ಲಿ ಉನ್ನತ ಹುದ್ದೆ ನೀಡಿದ್ದಾರೆ. ಈ ನಿರ್ಧಾರವನ್ನು ಕೊರಿಯಾ ವರ್ಕರ್ಸ್ ಪಕ್ಷದ ಹಿರಿಯ ಸದಸ್ಯರ ಸಮಿತಿ ಅನುಮೋದಿಸಿದೆ.

ಕಿಮ್ ಜಾಂಗ್ ಉನ್ ಅವರ ತಂದೆ ಕಿಮ್ ಜಾಂಗ್ ಇಲ್ ಅವರು ಪಕ್ಷದ ಶಾಶ್ವತ ಪ್ರಧಾನ ಕಾರ್ಯದರ್ಶಿ ಗೌರವ ಪಡೆದ 20ನೇ ವರ್ಷಾಚರಣೆ ನಿಮಿತ್ತ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪಕ್ಷದ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೇಂದ್ರೀಯ ಸಮಿತಿಯ ರಾಜಕೀಯ ವ್ಯವಹಾರಗಳ ವಿಭಾಗಕ್ಕೆ ಕಿಮ್ ಯೊ ಅವರು ಪರ್ಯಾಯ ಸದಸ್ಯರಾಗಿರುತ್ತಾರೆ.

ಕಿಮ್ ಜಾಂಗ್ ಉನ್ ಅವರ ನಂಬಿಕಸ್ಥ ವ್ಯಕ್ತಿ ಎಂದು ಕಿಮ್ ಯೊ ಜಾಂಗ್ ಅವರು ಕರೆಸಿಕೊಂಡಿದ್ದಾರೆ. ಇವರಿಬ್ಬರ ತಾಯಿ ಕೊ ಯೊಂಗ್ ಹುಯಿ.

ಕೊರಿಯಾ ಮೇಲೆ ವಿಶ್ವಸಂಸ್ಥೆ ಹೇರಿರುವ ಆರ್ಥಿಕ ದಿಗ್ಬಂಧಗಳನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಕೇಂದ್ರೀಯ ಸಮಿತಿ ಪುನರ್‌
ರಚನೆ ಮಾಡಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT