ಜಯಭೇರಿ ಮೊಳಗಿಸಿದ ಮಧ್ಯಪ್ರದೇಶ

ಸೋಮವಾರ, ಜೂನ್ 24, 2019
25 °C

ಜಯಭೇರಿ ಮೊಳಗಿಸಿದ ಮಧ್ಯಪ್ರದೇಶ

Published:
Updated:
ಜಯಭೇರಿ ಮೊಳಗಿಸಿದ ಮಧ್ಯಪ್ರದೇಶ

ಇಂದೋರ್‌: ತವರಿನ ನೆಲದಲ್ಲಿ ಅಮೋಘ ಆಟವಾಡಿದ ಮಧ್ಯಪ್ರದೇಶ ತಂಡದವರು ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದರು. ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ‘ಸಿ’ ಗುಂಪಿನ ಪಂದ್ಯದಲ್ಲಿ ಈ ತಂಡ ಬರೋಡವನ್ನು ಮಣಿಸಿತು.

ಮೊದಲ ಇನಿಂಗ್ಸ್‌ನಲ್ಲಿ 551 ರನ್‌ ಗಳಿಸಿದ್ದ ಮಧ್ಯಪ್ರದೇಶ ಎದುರಾಳಿಗಳನ್ನು 302 ರನ್‌ಗಳಿಗೆ ಆಲೌಟ್ ಮಾಡಿತ್ತು. ಫಾಲೊ ಆನ್ ಆದ ಬರೋಡ 318 ರನ್‌ ಗಳಿಸಿತ್ತು. 70 ರನ್‌ಗಳ ಗುರಿ ಬೆನ್ನತ್ತಿದ ಮಧ್ಯಪ್ರದೇಶ ಅಂತಿಮ ದಿನವಾದ ಸೋಮವಾರ 16 ಓವರ್‌ಗಳಲ್ಲಿ ಜಯದ ನಗೆ ಸೂಸಿತು.

ಸೌರಾಷ್ಟ್ರ, ಕೇರಳ ಮತ್ತು ರೈಲ್ವೇಸ್ ತಂಡಗಳು ಮೂರನೇ ದಿನವೇ ಜಯ ಗಳಿಸಿದ್ದವು. ಉಳಿದ ಪಂದ್ಯಗಳು ಡ್ರಾಗೊಂಡವು. ಎ ಗುಂಪಿನ ಹೈದರಾಬಾದ್‌ ಮತ್ತು ಮಹಾರಾಷ್ಟ್ರ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಸಂಕ್ಷಿಪ್ತ ಸ್ಕೋರ್‌: ಎ ಗುಂಪು: ಅಸ್ಸಾಂ: 95 ಓವರ್‌ಗಳಲ್ಲಿ 258 ಮತ್ತು 108.4 ಓವರ್‌ಗಳಲ್ಲಿ 255; ದೆಹಲಿ: 135.2 ಓವರ್‌ಗಳಲ್ಲಿ 435 ಮತ್ತು 8 ಓವರ್‌ಗಳಲ್ಲಿ 2ಕ್ಕೆ49. ಫಲಿತಾಂಶ: ಡ್ರಾ.

ಬಿ ಗುಂಪು: ರಾಜಸ್ತಾನ: 115.2 ಓವರ್‌ಗಳಲ್ಲಿ 330 ಮತ್ತು 68 ಓವರ್‌ಗಳಲ್ಲಿ 4ಕ್ಕೆ246; ಜಮ್ಮು ಮತ್ತು ಕಾಶ್ಮೀರ: 156.5 ಓವರ್‌ಗಳಲ್ಲಿ 8ಕ್ಕೆ 436. ಫಲಿತಾಂಶ: ಡ್ರಾ.

ಸಿ ಗುಂಪು: ಮಧ್ಯಪ್ರದೇಶ: 164 ಓವರ್‌ಗಳಲ್ಲಿ 8ಕ್ಕೆ 551 ಡಿಕ್ಲೇರ್‌; ಬರೋಡ: 79 ಓವರ್‌ಗಳಲ್ಲಿ 302 ಮತ್ತು 76.3 ಓವರ್‌ಗಳಲ್ಲಿ 318 (ಯೂಸುಫ್ ಪಠಾಣ್‌ ಔಟಾಗದೆ 136, ಅತೀತ್ ಶೇಟ್‌ 109; ಈಶ್ವರ್ ಪಾಂಡೆ 40ಕ್ಕೆ5, ಮಿಹಿರ್ ಹಿರ್ವಾನಿ 77ಕ್ಕೆ3) ; ಮಧ್ಯಪ್ರದೇಶ (ಎರಡನೇ ಇನಿಂಗ್ಸ್‌): 16 ಓವರ್‌ಗಳಲ್ಲಿ 2ಕ್ಕೆ 73 (ಹರಪ್ರೀತ್ ಸಿಂಗ್‌ 44). ಫಲಿತಾಂಶ: ಮಧ್ಯಪ್ರದೇಶಕ್ಕೆ 8 ವಿಕೆಟ್‌ಗಳ ಜಯ. ತ್ರಿಪುರ: 68 ಓವರ್‌ಗಳಲ್ಲಿ 8ಕ್ಕೆ194; ಒಡಿಶಾ: 5 ಓವರ್‌ಗಳಲ್ಲಿ 1ಕ್ಕೆ18. ಫಲಿತಾಂಶ: ಮಳೆ ಅಡ್ಡಿಪಡಿಸಿದ ಪಂದ್ಯ ಡ್ರಾ. ತಮಿಳುನಾಡು: 85 ಓವರ್‌ಗಳಲ್ಲಿ 176 ಮತ್ತು 105 ಓವರ್‌ಗಳಲ್ಲಿ 350; ಆಂಧ್ರಪ್ರದೇಶ: 123.4 ಓವರ್‌ಗಳಲ್ಲಿ 309 ಮತ್ತು 41.4 ಓವರ್‌ಗಳಲ್ಲಿ 7ಕ್ಕೆ 198. ಫಲಿತಾಂಶ: ಡ್ರಾ.

ಡಿ ಗುಂಪು: ಬೆಂಗಾಲ್‌: 137 ಓವರ್‌ಗಳಲ್ಲಿ 9ಕ್ಕೆ552 ಮತ್ತು 22 ಓವರ್‌ಗಳಲ್ಲಿ 5ಕ್ಕೆ 161; ಸರ್ವಿಸಸ್‌: 111.2 ಓವರ್‌ಗಳಲ್ಲಿ 359 ಮತ್ತು 77 ಓವರ್‌ಗಳಲ್ಲಿ 7ಕ್ಕೆ212. ಫಲಿತಾಂಶ: ಡ್ರಾ. ಛತ್ತೀಸಗಡ: 161.3 ಓವರ್‌ಗಳಲ್ಲಿ 458; ಗೋವಾ: 122.1 ಓವರ್‌ಗಳಲ್ಲಿ 282 ಮತ್ತು 67 ಓವರ್‌ಗಳಲ್ಲಿ 7ಕ್ಕೆ170. ಫಲಿತಾಂಶ: ಡ್ರಾ. ಹಿಮಾಚಲ ಪ್ರದೇಶ: 148 ಓವರ್‌ಗಳಲ್ಲಿ 8ಕ್ಕೆ 729 ಮತ್ತು 40 ಓವರ್‌ಗಳಲ್ಲಿ 6ಕ್ಕೆ145; ಪಂಜಾಬ್‌: 154.3 ಓವರ್‌ಗಳಲ್ಲಿ 601. ಫಲಿತಾಂಶ: ಡ್ರಾ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry