ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ರಾಜ್ಯ ಸಂಸ್ಥೆಗಳಿಗೆ ₹ 50 ಕೋಟಿ

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಈಶಾನ್ಯ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ಅಭಿವೃದ್ಧಿಗೆ ₹ 50 ಕೋಟಿ ಅನುದಾನ ಒದಗಿಸಲು ಬಿಸಿಸಿಐ ಹಣಕಾಸು ಸಮಿತಿ ಸೋಮವಾರ ನಿರ್ಧರಿಸಿದೆ. ಹೊಸ ಪ್ರದೇಶ ಅಭಿವೃದ್ಧಿ ಯೋಜನೆಯ ಭಾಗವಾಗಿ ಈ ಮೊತ್ತ ನೀಡಲು ನಿರ್ಧರಿಸಲಾಗಿದೆ ಎಂದು ಯೋಜನೆಯ ಮುಖ್ಯಸ್ಥ ಅವಿಶೇಕ್‌ ದಾಲ್ಮಿಯಾ ತಿಳಿಸಿದರು.

ಈ ಮೊತ್ತವನ್ನು ಒದಗಿಸುವ ಪ್ರಸ್ತಾವವನ್ನು ಖಜಾಂಚಿ ಅನಿರುದ್ಧ ಚೌಧರಿ ಮುಂದಿಟ್ಟರು. ಇದಕ್ಕೆ ಅವಿರೋಧವಾಗಿ ಸದಸ್ಯರು ಒಪ್ಪಿಗೆ ಸೂಚಿಸಿದರು. ಹಣಕಾಸು ಸಮಿತಿ ಅಧ್ಯಕ್ಷ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಸಭೆಯಲ್ಲಿ ಇದ್ದರು.

‘ಇದು ವಿಶೇಷ ಅನುದಾನ. ಇಂಥ ಯೋಜನೆಯೊಂದು ಅಗತ್ಯ ಮತ್ತು ಅನಿವಾರ್ಯವಾಗಿತ್ತು. ಪೂರ್ಣ ಪ್ರಮಾಣದ ಕ್ರಿಕೆಟ್ ಕ್ರೀಡಾಂಗಣ, ಸಣ್ಣ ಮೈದಾನಗಳು, ಒಳಾಂಗಣ ಕ್ರೀಡಾಂಗಣಗಳು ಇತ್ಯಾದಿ ಅಭಿವೃದ್ಧಿ ಕಾರ್ಯಗಳಲ್ಲಿ ಒಳಗೊಂಡಿವೆ’ ಎಂದು ದಾಲ್ಮಿಯಾ ತಿಳಿಸಿದರು.

ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಒಳಾಂಗಣ ಕ್ರೀಡಾಂಗಣಗಳ ಸ್ಥಾಪನೆ, ಸಿಕ್ಕಿಂ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಅಗತ್ಯ ಸಾಮಗ್ರಿಗಳ ಖರೀದಿಗೂ ಈ ಮೊತ್ತದಲ್ಲಿ ಒಂದು ಭಾಗವನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಯೋಜನೆಗೆ ಬಿಸಿಸಿಐನ ಆಡಳಿತಾಧಿಕಾರಿಗಳ ಸಮಿತಿ ಅನುಮೋದನೆ ನೀಡಬೇಕಾದ ಅಗತ್ಯವಿದೆ. ಇದರ ನಂತರ ಮೂಲಸೌಲಭ್ಯ ಕಲ್ಪಿಸಲು ಬಿಸಿಸಿಐ ನೇರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಈ ಮೂಲಕ ಮಂಡಳಿಯ ದೀರ್ಘಕಾಲದ ಯೋಜನೆಗೆ ಕಾಯಕಲ್ಪ ಸಿಕ್ಕಿದಂತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT