ಎಸ್‌ಪಿಜಿ ಅಧಿಕಾರಿಗಳ ಸಮವಸ್ತ್ರ ಭತ್ಯೆ ಹೆಚ್ಚಳ

ಶನಿವಾರ, ಮೇ 25, 2019
22 °C

ಎಸ್‌ಪಿಜಿ ಅಧಿಕಾರಿಗಳ ಸಮವಸ್ತ್ರ ಭತ್ಯೆ ಹೆಚ್ಚಳ

Published:
Updated:

ನವದೆಹಲಿ: ರಾಜತಾಂತ್ರಿಕ ಅಧಿಕಾರಿಗಳು ಹಾಗೂ ವಿಶೇಷ ರಕ್ಷಣಾ ತಂಡದ (ಎಸ್‌ಪಿಜಿ) ಅಧಿಕಾರಿಗಳಿಗೆ ನೀಡುವ ಸಮವಸ್ತ್ರ ಭತ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ಏಳನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಕರ್ತವ್ಯ ನಿರ್ವಹಿಸುವ ವೇಳೆ, ಎಸ್‌ಪಿಜಿ ಅಧಿಕಾರಿಗಳಿಗೆ ವಾರ್ಷಿಕ ₹27,800 ಹಾಗೂ ಕರ್ತವ್ಯ ಇಲ್ಲದ ವೇಳೆ ವಾರ್ಷಿಕ ₹21,225 ಸಮವಸ್ತ್ರ ಭತ್ಯೆ ದೊರಕುತ್ತದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

ಶಿಫಾರಸು ಜಾರಿಗೆ ಬರುವ ಮೊದಲು, ಅಧಿಕಾರಿಗಳು ವಾರ್ಷಿಕ ₹9,000 ಸಮವಸ್ತ್ರ ಭತ್ಯೆ ಪಡೆಯುತ್ತಿದ್ದರು. ವಾರ್ಷಿಕ ₹10,000ಸಮವಸ್ತ್ರ ಭತ್ಯೆ ನೀಡುವಂತೆ ಆಯೋಗ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಹಣಕಾಸು ಕಾರ್ಯದರ್ಶಿ ಅಶೋಕ್ ಲವಾಸಾ ಅವರ ನೇತೃತ್ವದ ಭತ್ಯೆಗಳ ಸಮಿತಿ ಈ ವರದಿ ಪರಿಶೀಲಿಸಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry