ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಾ ಆಸ್ತಿ ಮೇಲೆ ದೀಪಾ ಹಕ್ಕು: ತಮಿಳುನಾಡು ಸರ್ಕಾರಕ್ಕೆ ನೋಟಿಸ್

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಅವರು ಸಲ್ಲಿಸಿರುವ ಅರ್ಜಿ ಸಂಬಂಧ, ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಜಯಲಲಿತಾ ಅವರ ಪೋಯಸ್ ಗಾರ್ಡನ್‌ನ ‘ವೇದ ನಿಲಯಂ’ ನಿವಾಸವನ್ನು ಸ್ಮಾರಕವಾಗಿ ಬದಲಾಯಿಸಲು ಎಐಎಡಿಎಂಕೆ ಸರ್ಕಾರ ನಿರ್ಧರಿಸಿತ್ತು. ಇದನ್ನು ವಿರೋಧಿಸಿ ದೀಪಾ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ನನ್ನ ಅಜ್ಜಿ ವೇದವಲ್ಲಿ ಅಲಿಯಾಸ್ ಸಂಧ್ಯಾ(ತಂದೆಯ ತಾಯಿ) ಚೆನ್ನೈ ಹಾಗೂ ಸುತ್ತಮುತ್ತ ಸ್ವತ್ತುಗಳನ್ನು ಖರೀದಿಸಿದ್ದರು. 1971ರಲ್ಲಿ ಅವರು ಮೃತಪಟ್ಟರು. ಅವರ ಮಕ್ಕಳಾದ ಜಯಕುಮಾರ್ ಮತ್ತು ಜಯಲಲಿತಾ ‘ವೇದ ನಿಲಯಂ’ನಲ್ಲಿ ವಾಸಿಸುತ್ತಿದ್ದರು. ಜಯಲಲಿತಾ ನಿಧನದ ಬಳಿಕ, ಹಿಂದು ಕುಟುಂಬ ಕಾಯ್ದೆ 1956ರ ಅನ್ವಯ, ಎರಡನೇ ತಲೆಮಾರಿನವರಾದ ನಾನು ಮತ್ತು ನನ್ನ ಸಹೋದರ ಜೆ.ದೀಪಕ್ ಈ ಸ್ವತ್ತಿಗೆ ವಾರಸುದಾರರಾಗಿದ್ದೇವೆ. ನನ್ನನ್ನು ಸಂಪರ್ಕಿಸದೆ ರಾಜ್ಯ ಸರ್ಕಾರ, ಜಯಲಲಿತಾ ಅವರ ನಿವಾಸವನ್ನು ಸ್ಮಾರಕವಾಗಿ ಬದಲಿಸಲು ನಿರ್ಧರಿಸಿದೆ ಎಂದು ಈ ಅರ್ಜಿಯಲ್ಲಿ ದೀಪಾ ಉಲ್ಲೇಖಿಸಿದ್ದಾರೆ.

ಸ್ವತ್ತಿನ ಮೇಲೆ ತಾವು ಹಕ್ಕು ಹೊಂದಿದ್ದು, ಈ ವಿಷಯದಲ್ಲಿ ಮಧ್ಯಪ್ರವೇಶಿಸದೆ ಇರಲು ಮಾಡಿದ ಆಗ್ರಹವನ್ನು ಸರ್ಕಾರ ಪರಿಗಣಿಸಲಿಲ್ಲ. ಆದ್ದರಿಂದ ನ್ಯಾಯಾಲಯದ ಮೆಟ್ಟಿಲೇರಿದೆ ಎಂದು ದೀಪಾ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT