ಲಿಥಿಯಂ ಬೇಡ, ಜಲಜನಕ ಇಂಧನ ಬಳಸಿ: ಮಾಧವನ್‌ ನಾಯರ್‌ ಸಲಹೆ

ಶುಕ್ರವಾರ, ಮೇ 24, 2019
30 °C

ಲಿಥಿಯಂ ಬೇಡ, ಜಲಜನಕ ಇಂಧನ ಬಳಸಿ: ಮಾಧವನ್‌ ನಾಯರ್‌ ಸಲಹೆ

Published:
Updated:
ಲಿಥಿಯಂ ಬೇಡ, ಜಲಜನಕ ಇಂಧನ ಬಳಸಿ: ಮಾಧವನ್‌ ನಾಯರ್‌ ಸಲಹೆ

ಹೈದರಾಬಾದ್‌: ಜಲಜನಕ ಆಧರಿತ ಇಂಧನವೇ ಮುಂದಿನ ತಲೆಮಾರುಗಳಲ್ಲಿ ಮುಖ್ಯ ಇಂಧನವಾಗಿ ಬಳಕೆಯಾಗಲಿದೆ. ಹಾಗಾಗಿ ದೂರಗಾಮಿ ದೃಷ್ಟಿಕೋನದಿಂದ ಪ‍ರ್ಯಾಯ ಇಂಧನವಾಗಿ ಇದನ್ನು ಬಳಸುವುದೇ ಸರಿಯಾದ ಕ್ರಮ ಎಂದು ಹಿರಿಯ ವಿಜ್ಞಾನಿಗಳು ಹೇಳಿದ್ದಾರೆ. ಬ್ಯಾಟರಿ ಚಾಲಿತ ವಾಹನ ಬಳಕೆಗೆ ಕೇಂದ್ರ ಸರ್ಕಾರವು ಭಾರಿ ಪ್ರೋತ್ಸಾಹ ನೀಡುತ್ತಿರುವುದರ ನಡುವೆಯೇ ಈ ಅಭಿಪ್ರಾಯ ವ್ಯಕ್ತವಾಗಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆಯು (ಇಸ್ರೊ) ಪ್ರಾತ್ಯಕ್ಷಿಕೆಗಾಗಿ ಜಲಜನಕ ಆಧರಿತ ಬಸ್ಸೊಂದನ್ನು ಅಭಿವೃದ್ಧಿಪಡಿಸಿದೆ ಎಂದು ಇಸ್ರೊದ ಮಾಜಿ ಅಧ್ಯಕ್ಷ ಜಿ. ಮಾಧವನ್‌ ನಾಯರ್‌ ಹೇಳಿದ್ದಾರೆ. ಹಲವು ವರ್ಷಗಳ ಸಂಶೋಧನೆ ಬಳಿಕ ಇಸ್ರೊ ಮತ್ತು ಟಾಟಾ ಮೋಟರ್ಸ್ ಜತೆಯಾಗಿ ಈ ಬಸ್ಸನ್ನು ಅಭಿವೃದ್ಧಿ‍ಪಡಿ

ಸಿವೆ ಎಂದು ಅವರು ತಿಳಿಸಿದರು. 

2030ರ ಹೊತ್ತಿಗೆ ದೇಶದಲ್ಲಿರುವ ಎಲ್ಲ ಕಾರುಗಳು ಬ್ಯಾಟರಿ ಚಾಲಿತ ಆಗಬೇಕು ಎಂಬ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಇಂಧನ ಆಮದು ಪ್ರಮಾಣ ಮತ್ತು ವಾಹನಗಳ ನಿರ್ವಹಣಾ ವೆಚ್ಚ ಕಡಿಮೆ ಮಾಡುವುದು ಇದರ ಉದ್ದೇಶ. ಇದಕ್ಕಾಗಿ ಬ್ಯಾಟರಿ ಚಾಲಿತ ವಾಹನಗಳ ಮಾರಾಟಕ್ಕೆ ಸರ್ಕಾರ ಒತ್ತು ನೀಡುತ್ತಿದೆ. ಅದಕ್ಕಾಗಿ ಫೇಮ್‌ ಇಂಡಿಯಾದಂತಹ ಯೋಜನೆಗಳನ್ನೂ ಹಾಕಿಕೊಳ್ಳಲಾಗಿದೆ.

10 ಸಾವಿರ ವಿದ್ಯುತ್‌ ಚಾಲಿತ ಬಸ್‌ಗಳನ್ನು ಖರೀದಿ ಮಾಡುವುದಾಗಿ ಸರ್ಕಾರಿ ಸ್ವಾಮ್ಯದ ಎನರ್ಜಿ ಎಫೀಷಿಯೆನ್ಸಿ ಸರ್ವಿಸಸ್‌ ಲಿ. (ಇಇಎಸ್‌ಎಲ್‌) ಕಳೆದ ತಿಂಗಳು ಹೇಳಿತ್ತು. 2030ಕ್ಕೆ ದೇಶದಲ್ಲಿರುವ ಎಲ್ಲ ವಾಹನಗಳು ವಿದ್ಯುತ್‌ ಚಾಲಿತ ಆಗಿರಬೇಕು ಎಂಬ ಗುರಿ ಸರ್ಕಾರಕ್ಕೆ ಇದೆ ಎಂದು ಇತ್ತೀಚಿನವರೆಗೆ ವಿದ್ಯುತ್‌  ಸಚಿವರಾಗಿದ್ದ ಪೀಯೂಷ್‌ ಗೋಯಲ್‌ ಹೇಳಿದ್ದರು.

ಪರಿಸರಸ್ನೇಹಿ, ಪರ್ಯಾಯ ಇಂಧನ ಬಳಕೆಯ ವಾಹನಗಳನ್ನು ಅಭಿವೃದ್ಧಿಪಡಿಸುವಂತೆ ವಾಹನ ತಯಾರಕರಿಗೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸಲಹೆ ನೀಡಿದ್ದರು. ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಪರ್ಯಾಯ ಮಾರ್ಗವನ್ನು ಅನುಸರಿಸಿದ್ದರೆ ವಾಹನ ತಯಾರಿಕಾ ಕಂಪೆನಿಗಳಿಗೆ ಉಳಿಗಾಲವಿಲ್ಲ. ಮತ್ತೆ ಸರ್ಕಾರವನ್ನು ದೂರಿ ಪ್ರಯೋಜನವಾಗದು ಎಂಬ ಅರ್ಥದ ಮಾತನ್ನುಗಡ್ಕರಿ ಆಡಿದ್ದರು.

ಆದರೆ, ಲಿಥಿಯಂ ಅಯಾನ್‌ ಬ್ಯಾಟರಿ ಬಳಸುವ ವಾಹನಗಳ ಬಳಕೆ ಹೆಚ್ಚಾದಂತೆ ಭಾರಿ ಸಮಸ್ಯೆ ಸೃಷ್ಟಿಯಾಗಬಹುದು ಎಂಬ ಎಚ್ಚರಿಕೆಯನ್ನು ನಾಯರ್‌ ಅವರು ಈಗ ನೀಡಿದ್ದಾರೆ. ಲಿಥಿಯಂ ಅಪಾಯಕಾರಿಯಾಗಿದ್ದು ಅದನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಸಾಧ್ಯವಿಲ್ಲ. ಅದು ಅತ್ಯಂತ ಮಾಲಿನ್ಯಕಾರಕ ವಸ್ತು. ಅದನ್ನು ಸಂಗ್ರಹಸಿ, ಸಂಸ್ಕರಿಸಲು ಸಮರ್ಪಕ ವ್ಯವಸ್ಥೆ ಅಗತ್ಯ ಎಂದು ಅವರು ಹೇಳಿದ್ದಾರೆ.

‘ಲಕ್ಷಾಂತರ ವಾಹನಗಳು ಈ ಬ್ಯಾಟರಿ ಬಳಸಿದರೆ ಬಳಕೆಯ ಬಳಿಕ ಈ ಬ್ಯಾಟರಿಗಳನ್ನು ಏನು ಮಾಡುವುದು? ಅವು ಅಪಾಯಕಾರಿ ಮಾಲಿನ್ಯ ಸೃಷ್ಟಿಸುತ್ತವೆ’ ಎಂದು ಅವರು ಎಚ್ಚರಿಸಿದ್ದಾರೆ. ಜತೆಗೆ, ಲಿಥಿಯಂ ಲಭ್ಯತೆ ಸೀಮಿತವಾಗಿದೆ. ಹಾಗಾಗಿಯೇ ಇಂತಹ ವಾಹನಗಳು ದುಬಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಲಜನಕ ಆಧರಿತ ಇಂಧನ ಬಳಕೆಯಿಂದ ವಾಹನಗಳು ಮಾಲಿನ್ಯ ಸೃಷ್ಟಿಸುವುದಿಲ್ಲ. ಇಂತಹ ವಾಹನಗಳು ನೀರಿನ ಆವಿಯನ್ನು ಮಾತ್ರ ಹೊರಗೆ ಉಗುಳುತ್ತವೆ ಎಂದು ಅವರು ಹೇಳಿದ್ದಾರೆ.

ಜಲಜನಕ ಬಳಕೆ ಹೇಗೆ

ವಾಹನದಲ್ಲಿ ಜಲಜನಕವನ್ನು ಸಾಂದ್ರೀಕೃತ ರೂಪದಲ್ಲಿ ಇರಿಸಲಾಗುತ್ತದೆ. ವಾತಾವರಣದಲ್ಲಿರುವ ಆಮ್ಲಜನಕದ ಜತೆ ಸಂಯೋಜನೆಗೊಳ್ಳುವ ಇದು ವಾಹನದಲ್ಲಿರುವ ಇಂಧನ ಕೋಶಗಳಿಗೆ ಶಕ್ತಿ ಒದಗಿಸುತ್ತದೆ. ಈ ಕೋಶಗಳು ವಾಹನದ ಮೋಟರ್‌ಗೆ ಇಂಧನ ಒದಗಿಸುತ್ತವೆ.

ಲಿಥಿಯಂ ಬಳಕೆ ಕಷ್ಟ

* ಲಿಥಿಯಂ ನಿರ್ವಹಣೆ ಬಹಳ ಕಷ್ಟ. ಅದಕ್ಕೆ ತೇವಾಂಶ ಇಲ್ಲದ ಪರಿಸರವೇ ಬೇಕು

* ಲಿಥಿಯಂ ಬ್ಯಾಟರಿಗಳ ಗರಿಷ್ಠ ಬಾಳಿಕೆ 10 ವರ್ಷ

* ವಾಹನಗಳ ಬ್ಯಾಟರಿಯಷ್ಟೇ ಗಾತ್ರದ ಸಾಧನವು ಜಲಜನಕವನ್ನು ವಿದ್ಯುತ್ತಾಗಿ ಪರಿವರ್ತಿಸುತ್ತದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry