ಟಿಟಿ: ಹರಮೀತ್‌–ಸೌಮ್ಯಜಿತ್‌ಗೆ ಬೆಳ್ಳಿ

ಬುಧವಾರ, ಜೂನ್ 26, 2019
28 °C

ಟಿಟಿ: ಹರಮೀತ್‌–ಸೌಮ್ಯಜಿತ್‌ಗೆ ಬೆಳ್ಳಿ

Published:
Updated:

ನವದೆಹಲಿ: ಐದನೇ ಶ್ರೇಯಾಂಕಿತ ಭಾರತದ ಜೋಡಿ ಹರಮೀತ್ ದೇಸಾಯಿ ಮತ್ತು ಸೌಮ್ಯಜಿತ್‌ ಘೋಷ್‌ ಅವರು ಶೆಷ್ಟೊಚೊವಾದಲ್ಲಿ ನಡೆಯುತ್ತಿರುವ ಐಟಿಟಿಎಫ್‌ ಚಾಲೆಂಜ್‌ ಪಾಲಿಶ್‌ ಓಪನ್‌ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು.

ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಅವರು ಎರಡನೇ ಶ್ರೇಯಾಂಕಿತ ಕೊರಿಯಾ ಜೋಡಿ ಹೊ ಕ್ವಾನ್ ಕಿಟ್‌ ಮತ್ತು ನ ಪಾಕ್ ನಮ್‌ ಎದುರು 12-10 6-11 8-11 9-11ರಿಂದ ಸೋತರು.

ಮೊದಲ ಗೇಮ್‌ನಲ್ಲಿ ಉತ್ತಮ ಆಟವಾಡಿ ಗೆದ್ದ ಭಾರತದ ಜೋಡಿಗೆ ಎರಡನೇ ಗೇಮ್‌ನಲ್ಲಿ ಎದುರಾಳಿಗಳು ಪೆಟ್ಟು ನೀಡಿದರು. ನಂತರ ಸುಲಭವಾಗಿ ಪ್ರಶಸ್ತಿ ಗೆದ್ದರು.

ಐಟಿಟಿಎಫ್‌ ವಿಶ್ವ ಟೂರ್ ಅಥವಾ ಐಟಿಟಿಎಫ್‌ ಚಾಲೆಂಜ್ ಸೀರಿಸ್‌ನಲ್ಲಿ ಹರಮೀತ್‌ ದೇಸಾಯಿ ಇದೇ ಮೊದಲ ಬಾರಿ ಡಬಲ್ಸ್ ವಿಭಾಗದ ಫೈನಲ್‌ ಪ್ರವೇಶಿಸಿದ್ದರು. ಸೌಮ್ಯಜಿತ್‌ಗೆ ಇದು ಈ ವರ್ಷದ ಎರಡನೇ ಫೈನಲ್‌ ಪಂದ್ಯ ಆಗಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry