ತಲೈವಾಸ್‌ಗೆ ಮುಂಬಾ ಸವಾಲು

ಮಂಗಳವಾರ, ಜೂನ್ 18, 2019
31 °C
ಜೈಪುರ–ದಬಂಗ್ ಪೈಪೋಟಿ

ತಲೈವಾಸ್‌ಗೆ ಮುಂಬಾ ಸವಾಲು

Published:
Updated:
ತಲೈವಾಸ್‌ಗೆ ಮುಂಬಾ ಸವಾಲು

ಜೈಪುರ: ‘ಎ’ ವಲಯದ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಯು ಮುಂಬಾ ತಂಡ ಪ್ರೊ ಕಬಡ್ಡಿ ಪಂದ್ಯದಲ್ಲಿ ಮಂಗಳವಾರ ತಮಿಳ್ ತಲೈವಾಸ್ ವಿರುದ್ಧ ಆಡಲಿದೆ.

ತಲೈವಾಸ್ ತಂಡ ‘ಬಿ’ ವಲಯದ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆಡಿದ 19 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿರುವ ಈ ತಂಡ 13 ಪಂದ್ಯಗಳನ್ನು ಸೋತು ಸಂಕಷ್ಟದಲ್ಲಿದೆ.

ಮುಂಬಾ ತಂಡ ರೈಡಿಂಗ್ ಹಾಗೂ ಟ್ಯಾಕಲ್ ಎರಡೂ ವಿಭಾಗದಲ್ಲಿ ಸಮತೋಲನ ಹೊಂದಿದೆ. ಆದರೆ ಪಂದ್ಯದ ಕೊನೆಯ ವೇಳೆ ಪಾಯಿಂಟ್ಸ್ ಗಳಿಸುವಾಗ ಈ ತಂಡದ ಆಟಗಾರರು ಒತ್ತಡಕ್ಕೆ ಒಳಗಾಗುವ ಕಾರಣ ಹಿಂದಿನ ಕೆಲವು ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಅನೂಪ್ ಕುಮಾರ್ ಸಾರಥ್ಯದ ತಂಡದಲ್ಲಿ ದರ್ಶನ್ ಕಡಿಯಾನ್ ಹಾಗೂ ಕಾಶಿಲಿಂಗ ಅಡಕೆ ಪ್ರಮುಖ ರೈಡರ್‌ಗಳು ಎನಿಸಿದ್ದಾರೆ.

ದಿನದ ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ದಬಂಗ್ ದೆಹಲಿ ತಂಡಗಳು ಸೆಣಸಲಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry