ದೀಪಿಕಾಗೆ ಸೋಲುಣಿಸಿದ ಜೋಷ್ನಾ

ಬುಧವಾರ, ಜೂನ್ 19, 2019
32 °C

ದೀಪಿಕಾಗೆ ಸೋಲುಣಿಸಿದ ಜೋಷ್ನಾ

Published:
Updated:
ದೀಪಿಕಾಗೆ ಸೋಲುಣಿಸಿದ ಜೋಷ್ನಾ

ಫಿಲಡೆಲ್ಫಿಯಾ: ದಿಟ್ಟ ಆಟ ಆಡಿದ ಜೋಷ್ನಾ ಚಿಣ್ಣಪ್ಪ , ಅಮೆರಿಕ ಓಪನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಸಹ ಸ್ಪರ್ಧಿ ದೀಪಿಕಾ ಪಳ್ಳಿಕಲ್‌ಗೆ ಸೋಲುಣಿಸಿದ್ದಾರೆ.

ಸೋಮವಾರ ನಡೆದ ಮೊದಲ ಸುತ್ತಿನ ಹೋರಾಟದಲ್ಲಿ ಜೋಷ್ನಾ 7–11, 11–8, 11–8, 11–9ರಲ್ಲಿ ಎದುರಾಳಿಯ ಸವಾಲು ಮೀರಿದರು.

ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಡಬಲ್ಸ್‌ ವಿಭಾಗದಲ್ಲಿ ಜೊತೆಯಾಗಿ ಆಡುವ ಉಭಯ ಆಟಗಾರ್ತಿಯರು ಸಿಂಗಲ್ಸ್‌ನಲ್ಲಿ ಮುಖಾಮುಖಿಯಾಗಿದ್ದರಿಂದ ಸಾಕಷ್ಟು ಕುತೂಹಲ ಗರಿಗೆದರಿತ್ತು.

ಆರಂಭಿಕ ಗೇಮ್‌ನಲ್ಲಿ ದೀಪಿಕಾ ಮಿಂಚಿನ ಆಟ ಆಡಿ ಗೆಲುವು ಒಲಿಸಿಕೊಂಡರು. ಆ ನಂತರ 13ನೇ ಶ್ರೇಯಾಂಕಿತೆ ಜೋಷ್ನಾ ಮೋಡಿ ಮಾಡಿದರು. ಚುರುಕಿನ ಡ್ರಾಪ್‌ ಮತ್ತು ಆಕರ್ಷಕ ರಿಟರ್ನ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು ಗೇಮ್‌ ಗೆದ್ದು 1–1ರಲ್ಲಿ ಸಮಬಲ ಮಾಡಿಕೊಂಡರು.

ಆ ನಂತರದ ಎರಡು ಗೇಮ್‌ಗಳಲ್ಲಿ ದೀಪಿಕಾ ತಿರುಗೇಟು ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ಮಿಂಚಿನ ಆಟ ಮುಂದುವರಿಸಿದ ಜೋಷ್ನಾ ನಂತರದ ಎರಡೂ ಗೇಮ್‌ಗಳಲ್ಲೂ ಅಬ್ಬರಿಸಿ 45ನೇ ನಿಮಿಷದಲ್ಲಿ ಗೆಲುವಿನ ತೋರಣ ಕಟ್ಟಿದರು.

ಮುಂದಿನ ಸುತ್ತಿನಲ್ಲಿ ಜೋಷ್ನಾ ಈಜಿಪ್ಟ್‌ನ ಐದನೇ ಶ್ರೇಯಾಂಕಿತೆ ನೌರಾನ್‌ ಗೊಹರ್‌ ವಿರುದ್ಧ ಆಡಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry