ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ನೇ ಸ್ಥಾನಕ್ಕೆ ಗೊಫಿನ್

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪ್ಯಾರಿಸ್: ಜಪಾನ್‌ ಓಪನ್‌ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡ ಬಲ್ಗೇರಿಯಾದ ಆಟಗಾರ ಡೇವಿಡ್ ಗೊಫಿನ್‌ ಸೋಮವಾರ ಬಿಡುಗಡೆಯಾದ ನೂತನ ಎಟಿಪಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಹತ್ತನೇ ಸ್ಥಾನಕ್ಕೆ ಏರಿದ್ದಾರೆ.

ರ‍್ಯಾಂಕಿಂಗ್‌ನಲ್ಲಿ ಗೊಫಿನ್ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ನವೆಂಬರ್‌ನಲ್ಲಿ ನಡೆಯುವ ಈ ಋತುವಿನ ಕೊನೆಯ ಎಟಿಪಿ ಟೂರ್ನಿಯನ್ನು ಅವರು ಗೆದ್ದುಕೊಳ್ಳುವ ಉತ್ಸಾಹದಲ್ಲಿದ್ದಾರೆ. 9, 875 ಪಾಯಿಂಟ್ಸ್ ಹೊಂದಿರುವ ಸ್ಪೇನ್‌ನ ರಫೆಲ್ ನಡಾಲ್ ಅಗ್ರಗಣ್ಯ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ನಂತರದ ಸ್ಥಾನಗಳಲ್ಲಿ ಕ್ರಮವಾಗಿ ರೋಜರ್ ಫೆಡರರ್‌, ಆ್ಯಂಡಿ ಮರ‍್ರೆ ಅಲೆಕ್ಸಾಂಡರ್ ಜ್ವೆರವ್‌, ಮರಿನ್ ಸಿಲಿಕ್ ಇದ್ದಾರೆ. ಡೇವಿಡ್‌ ಗೊಫಿನ್ ಅವರ ಬಳಿ 3,055 ಪಾಯಿಂಟ್ಸ್‌ಗಳು ಇವೆ. ನೊವಾಕ್ ಜೊಕೊವಿಚ್ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ರುಮೇನಿಯಾದ ಸಿಮೊನಾ ಹಲೆಪ್ ಸೋಮವಾರ ಅಧಿಕೃತವಾಗಿ ಪ್ರಕಟಗೊಂಡ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಖಚಿತವಾಗಿದೆ.

26 ವರ್ಷದ ಹಲೆಪ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ ರೊಮೇನಿಯಾದ ಮೊದಲ ಆಟಗಾರ್ತಿ ಎನಿಸಿದ್ದಾರೆ. ಸ್ಪೇನ್‌ನ ಗಾರ್ಬೈನ್ ಮುಗುರುಜಾ ಎರಡನೇ ಸ್ಥಾನದಲ್ಲಿ ಇದ್ದಾರೆ. ಈ ಇಬ್ಬರು ಆಟಗಾರ್ತಿಯರು ಕ್ರಮವಾಗಿ 6, 175 ಹಾಗೂ 6, 135 ಪಾಯಿಂಟ್ಸ್ ಹೊಂದಿದ್ದಾರೆ.

ಕರೊಲಿನಾ ಪ್ಲಿಸ್ಕೋವಾ, ಎಲಿನಾ ಸ್ವಿಟೋಲಿನಾ, ವೀನಸ್ ವಿಲಿಯಮ್ಸ್ ನಂತರದ ಸ್ಥಾನಗಳಲ್ಲಿ ಇದ್ದಾರೆ. ಕ್ಯಾರೊಲಿನಾ ವೋಜ್ನಿಯಾಕಿ ಆರನೇ ಸ್ಥಾನ ಗಳಿಸಿದ್ದರೆ, ಕರೊಲಿನಾ ಗ್ರೇಸಿಯಾ ಒಂಬತ್ತನೇ ಸ್ಥಾನದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT