ಕೈಗೆಟುಕುವ ಬೆಲೆಯ ಮನೆ ಶೇ 27 ರಷ್ಟು ಬೇಡಿಕೆ

ಶನಿವಾರ, ಮೇ 25, 2019
28 °C

ಕೈಗೆಟುಕುವ ಬೆಲೆಯ ಮನೆ ಶೇ 27 ರಷ್ಟು ಬೇಡಿಕೆ

Published:
Updated:
ಕೈಗೆಟುಕುವ ಬೆಲೆಯ ಮನೆ ಶೇ 27 ರಷ್ಟು ಬೇಡಿಕೆ

ಕೋಲ್ಕತ್ತ: 2017ರ ಜನವರಿ–ಸೆಪ್ಟೆಂಬರ್ ಅವಧಿಯಲ್ಲಿ ಕೈಗೆಟುಕುವ ಬೆಲೆಯ ಮನೆಗಳ ವಲಯ ಶೇ 27 ರಷ್ಟು ಪ್ರಗತಿ ಸಾಧಿಸಿದೆ ಎಂದು ರಿಯಲ್ ಎಸ್ಟೇಟ್‌ ಸಲಹಾ ಸಂಸ್ಥೆ ಕುಶ್ಮನ್‌ ಆ್ಯಂಡ್‌ ವೇಕ್‌ಫೀಲ್ಡ್‌ ವರದಿ ನೀಡಿದೆ.

ಹೈದರಾಬಾದ್‌, ಮುಂಬೈ, ಕೋಲ್ಕತ್ತದಲ್ಲಿ ಈ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಬೆಂಗಳೂರು, ಚೆನ್ನೈ, ದೆಹಲಿ–ರಾಜಧಾನಿ ಪ್ರದೇಶ ಮತ್ತು ಪುಣೆಯಲ್ಲಿ ಹೊಸ ಯೋಜನೆಗಳಿಗೆ ಬೇಡಿಕೆ ತಗ್ಗಿದೆ.

ಕೇಂದ್ರ ಸರ್ಕಾರ, ಕೈಗೆಟುಕುವ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿದೆ. ಕೆಲವು ವಿನಾಯ್ತಿಗಳನ್ನೂ ಘೋಷಿಸಿದೆ. ಹಾಗಾಗಿ ನಿರ್ಮಾಣಗಾರರು ಮತ್ತು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ. ಇಂತಹ ಮನೆಗಳ ನಿರ್ಮಾಣಕ್ಕೆ ನಿರ್ಮಾಣಗಾರರಿಗೆ ಸ್ಪರ್ಧಾತ್ಮಕ ಬಂಡವಾಳ ನೆರವೂ ಲಭ್ಯವಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.

ಒಂದನೇ ಶ್ರೇಣಿಯ ನಗರಗಳಲ್ಲಿ ಜಾಗದ ಕೊರತೆ ಇದೆ. ಜಾಗದ ಬೆಲೆಯೂ ಗರಿಷ್ಠ ಮಟ್ಟದಲ್ಲಿದೆ. ಹಾಗಾಗಿ ಇಲ್ಲಿ ಕೈಗೆಟುಕುವ ಬೆಲೆಯ ಮನೆಗಳ ನಿರ್ಮಾಣ ಯೋಜನೆ ದೊಡ್ಡ ಸವಾಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry